spot_img
Wednesday, January 22, 2025
spot_img

ಅರಸಮ್ಮಕಾನು:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕುಂದಾಪುರ: ಸರ್ಕಾರಿ ಶಾಲೆಗಳು ದಾನಿಗಳು,ಹಳೆ ವಿದ್ಯಾರ್ಥಿಗಳ ಕೊಡುಗೆಗಳು ಹಾಗೂ ಶಿಕ್ಷಕರ ಪರಿಶ್ರಮದಿಂದ ಪ್ರಗತಿಯನ್ನು ಹೊಂದುತ್ತಿರುವುದು ಪ್ರಶಂಸನೀಯ. ಮಕ್ಕಳಿಗೆ ಶಾಲಾ ವಾರ್ಷಿಕೋತ್ಸವಗಳು ಸಾಂಸ್ಕೃತಿಕ ,ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕೊಡ್ಗಿ ಹೇಳಿದರು.

ಅವರು ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎನ್.ಭುಜಂಗ ಶೆಟ್ಟಿ ಕುದ್ರುಬೀಡು ಕೊಳ್ಕೆಬೈಲು ಸ್ಮಾರಕ ರಂಗ ವೇದಿಕೆಯಲ್ಲಿ ನಡೆದ ವಾರ್ಷೀಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಇತ್ತೀಚೆಗೆ ಮಾತನಾಡಿದರು.

ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ,ಉಪಾಧ್ಯಕ್ಷೆ ಬೇಬಿ ಹೆಗ್ಡೆ, ಸದಸ್ಯೆ ಜಯಲಕ್ಷ್ಮೀ, ಸದಾನಂದ ಪೂಜಾರಿ,ರತಿ ಕುಲಾಲ್, ಸುಶೀಲಾ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ರತ್ನಾಕರ ಶೆಟ್ಟಿ ಕುದ್ರುಬೀಡು ಕೊಳ್ಕೆಬೈಲು,ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ್ ಯು, ವಾರ್ಷೀಕೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಹೆಗ್ಡೆ,ಎಸ್‌ಡಿ‌ಎಂಸಿ ಅಧ್ಯಕ್ಷ ವಸಂತ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶ್ರೀನಿವಾಸ ಉಪ್ಪೂರು,ಆರ್ಥಿಕ ಸಮಿತಿ ಅಧ್ಯಕ್ಷ ವಾಸುದೇವ ನಕ್ಷತ್ರಿ, ವಿದ್ಯಾರ್ಥಿ ನಾಯಕ ಮಾ.ಆಯುಷ್ ಜಿ, ಶಿಕ್ಷಕ ವೃಂದವರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಶಿಧರ ಶೆಟ್ಟಿ ಶಾಂದ್ರಬೆಟ್ಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಭೋಜ ನಾಯ್ಕ ಕರ್ಪಾಡಿ ಶೇಡಿಮನೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿಶೇಷ ಕ್ರೀಡಾಪಟು ಕು.ಅತುಲ್ಯ,ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಹೆಗ್ಡೆ ಶೇಡಿಮನೆ ಇವರುಗಳಿಗೆ ಸನ್ಮಾನ,ಧತ್ತಿನಿಧಿ ಬಹುಮಾನ ವಿತರಣೆ, ಶಾಲಾ ಮಕ್ಕಳು ಹಾಗೂ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ವೈವಿಧ್ಯ,ರೂಪಕ,ನಾಟಕ,ಮೂಕಾಭಿನಯ,ಏಕಪಾತ್ರಾಭಿನಯ ಸೇರಿದಂತೆ ಇನ್ನೀತರ ಕಾರ್ಯಕ್ರಮಗಳು ನಡೆಯಿತು.
ಬೆಳಿಗ್ಗೆ ಎಸ್‌ಡಿ‌ಎಂಸಿ ಅಧ್ಯಕ್ಷ ವಸಂತ ಪೂಜಾರಿ ಅಧ್ಯಕ್ಷತೆಯಲ್ಲಿ ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಧ್ವಜಾರೋಹಣ ನೇರವೇರಿಸಿದರು

ಅಮಾಸೆಬೈಲು ಪೊಲೀಸ್ ಠಾಣಾಧಿಕಾರಿ ಸೌಮ್ಯ ಜೆ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಅರಸಮ್ಮಕಾನು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾಗರಾಜ ಬಾಯರಿ ಗಂಗಡಬೈಲು, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ ಸೂರ್‍ಗೋಳಿ, ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ್ ಯು,ಅಲ್ಬಾಡಿ-ಆರ್ಡಿ ಕ್ಲಸ್ಟರ್ ಸಮೂಹ ಸಂಪನ್ಮೋಲ ವ್ಯಕ್ತಿ ಅನೂಪ್‌ಕುಮಾರ್ ಶೆಟ್ಟಿ ಭಾಗವಹಿಸಿದರು.

ವಾರ್ಷೀಕೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಹೆಗ್ಡೆ ಸ್ವಾಗತಿಸಿದರು.ಮುಖ್ಯ ಶಿಕ್ಷಕ ಶ್ರೀನಿವಾಸ ಉಪ್ಪೂರು ವರದಿ ವಾಚಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು, ಗೌರವ ಶಿಕ್ಷಕಿ ಕು.ರಮ್ಯಾ ಕಾರ್ಯಕ್ರಮ ನಿರೂಪಿಸಿದರು.ವಾರ್ಷೀಕೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಪ್ರವೀಣಕುಮಾರ್ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!