spot_img
Wednesday, January 22, 2025
spot_img

ವಸಾಹತುಶಾಹಿ ಕಾಲಘಟ್ಟದ ಮೂರು ಹೊಸ ಕ್ರಿಮಿನಲ್ ನ್ಯಾಯ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಜನಪ್ರತಿನಿಧಿ ವಾರ್ತೆ ( ನವ ದೆಹಲಿ ) : ಕಳೆದ ವಾರ ಸಂಸತ್ತು ಅಂಗೀಕರಿಸಿದ ಮೂರು ಹೊಸ ಕ್ರಿಮಿನಲ್ ನ್ಯಾಯ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ವಸಾಹತುಶಾಹಿ ಕಾಲಘಟ್ಟದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872 ರ ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಾಯಿಸಿದ್ದು, ಮೂರು ಹೊಸ ಕಾನೂನುಗಳಾಗಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಅಂಗೀಕರಿಸಲಾಗಿತ್ತು. 

ಸಂಸತ್ತಿನಲ್ಲಿ ಮೂರು ವಿಧೇಯಕಗಳ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷೆ ನೀಡುವ ಬದಲು ನ್ಯಾಯ ಒದಗಿಸುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದ್ದರು.

ಆಗಸ್ಟ್‌ನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಗಳನ್ನು ಮೊದಲು ಮಂಡಿಸಲಾಗಿತ್ತು. ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಹಲವಾರು ಶಿಫಾರಸುಗಳನ್ನು ಮಾಡಿದ ನಂತರ, ಸರ್ಕಾರವು ಬಿಲ್‌ಗಳನ್ನು ಹಿಂಪಡೆಯಲು ನಿರ್ಧರಿಸಿತು. ಕಳೆದ ವಾರ ಅವುಗಳ ಮರುರೂಪಿಸಿದ ಆವೃತ್ತಿಗಳನ್ನು ಪರಿಚಯಿಸಿತ್ತು.

ಭಾರತೀಯ ನ್ಯಾಯ ಸಂಹಿತೆಯು ಪ್ರತ್ಯೇಕತೆಯ ಕೃತ್ಯಗಳು, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು, ಸಾರ್ವಭೌಮತ್ವ ಅಥವಾ ಏಕತೆಗೆ ಅಪಾಯವನ್ನುಂಟುಮಾಡುವಂತಹ ಅಪರಾಧಗಳನ್ನು ಪಟ್ಟಿಮಾಡುತ್ತದೆ.

ಭಾರತೀಯ ನ್ಯಾಯ ಸಂಹಿತೆಯಲ್ಲಿ ಮೊದಲ ಬಾರಿಗೆ ಭಯೋತ್ಪಾದನೆ ಪದವನ್ನು ವ್ಯಾಖ್ಯಾನಿಸಲಾಗಿದೆ. ಐಪಿಸಿಯಲ್ಲಿ ಅದು ಇರಲಿಲ್ಲ. ಹೊಸ ಕಾನೂನುಗಳ ಅಡಿಯಲ್ಲಿ, ದಂಡವನ್ನು ವಿಧಿಸುವ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಹೆಚ್ಚಿಸಲಾಗಿದೆ. 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!