spot_img
Wednesday, January 22, 2025
spot_img

ಮಹಾರಾಷ್ಟ್ರ ಮತ್ತು ಕರ್ನಾಟಕದ 41ಕಡೆಗಳಲ್ಲಿ ಎನ್‌ಐಎ ದಾಳಿ : 15 ಮಂದಿ ವಶ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಮಹಾರಾಷ್ಟ್ರ ಮತ್ತು ಕರ್ನಾಟಕದ 41 ಕಡೆಗಳಲ್ಲಿ ಎನ್‌ಐಎ ದಾಳಿ ನಡೆಸುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿನ ಐಸಿಸ್ ಭಯೋತ್ಪಾದಕ ಪಿತೂರಿಯನ್ನು ಬಹಿರಂಗಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಬಂಧಿತರು ಪುಣೆ ಮೂಲದವರಾಗಿದ್ದು, ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿದ್ದರು.

ವಿವರಗಳ ಪ್ರಕಾರ, ಕರ್ನಾಟಕದ ಕೆಲವು ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿದ್ದರೆ, ಮಹಾರಾಷ್ಟ್ರದಲ್ಲಿ ಪುಣೆ, ಥಾಣೆ ಗ್ರಾಮಾಂತರ, ಥಾಣೆ ನಗರ ಮತ್ತು ಮೀರಾ ಭಯಂದರ್‌ನಲ್ಲಿ ದಾಳಿ ನಡೆಸಲಾಗುತ್ತಿದೆ.

ತನಿಖೆಯು ಭಾರತದೊಳಗೆ ಐಸಿಸ್‌ನ ಉಗ್ರಗಾಮಿ ಸಿದ್ಧಾಂತವನ್ನು ಪ್ರಚಾರ ಮಾಡಲು ಬದ್ಧವಾಗಿರುವ ವ್ಯಕ್ತಿಗಳ ಜಾಲವನ್ನು ಬಯಲುಗೊಳಿಸಿದೆ.

ಈ ಜಾಲವು ಐಸಿಸ್‌ನ ಖಲೀಫಾ (ನಾಯಕ)ಗೆ ನಿಷ್ಠೆಯ ಪ್ರಮಾಣ (ಬಯಾತ್) ಮಾಡಿಕೊಂಡಿದ್ದಲ್ಲದೇ, ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ತಯಾರಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ತನಿಖಾ ಮೂಲಗಳು ಹೇಳಿವೆ.

ಐಸಿಸ್‌ನ ಈ ಜಾಲವು ಭಾರತದ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದೆ ಎಂದು ಎನ್‌ಐಎ ಮೂಲಗಳು ಮಾಹಿತಿ ನೀಡಿವೆ ಎಂದು  ಸುದ್ದಿ ಸಂಸ್ಥೆಗಳ ವರದಿಗಳು ಹೇಳಿವೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!