Sunday, September 8, 2024

ಪರಿಷತ್‌ ಅಧಿವೇಶನಕ್ಕೂ ವಿಪಕ್ಷ ನಾಯಕ ಇಲ್ಲ | ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಇನ್ನೆಷ್ಟು ದಿನ ಕಳೆಯಬೇಕು? : ಕಾಂಗ್ರೆಸ್‌ ಪ್ರಶ್ನೆ

ಜನಪ್ರತಿನಿಧಿ ವಾರ್ತೆ (ಬೆಂಗಳೂರು ) : ಇಂದಿನಿಂದ (ಮಂಗಳವಾರ) ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ನ ವಿಧಾನಸೌಧದಲ್ಲಿ ಆರಂಭವಾಗಿದೆ.ಈ ಅಧಿವೇಶನದಲ್ಲೂ ವಿಧಾನಪರಿಷತ್‌ ಕಲಾಪ ಅಧಿಕೃತ ವಿರೋಧ ಪಕ್ಷದ ನಾಯಕನಿಲ್ಲದೇ ಆರಂಭವಾಗಿದೆ.   

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಆಡಳಿತರೂಢ ಕಾಂಗ್ರೆಸ್‌ ಸರ್ಕಾರ ಟೀಕೆ ಮಾಡಿದೆ, ತನ್ನ ಅಧಿಕೃತ ʼಎಕ್ಸ್‌ʼ ಸಾಮಾಜಿಕ ಆಳತಾಣದ ಮೂಲದ ಬಿಜೆಪಿಯನ್ನು ಟೀಕಿಸಿದ ಕಾಂಗ್ರೆಸ್‌, ಸರ್ಕಾರ ರಚನೆಯಾಗಿ 7 ತಿಂಗಳು ಕಳೆಯುತ್ತಿದೆ, ಚಳಿಗಾಲದ ಅಧಿವೇಶನ ಶುರುವಾಗಿದೆ. ಇನ್ನೂ ಸಹ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಲಿಲ್ಲ! ಎಂದು ತೆಗಳಿದೆ.

ಇನ್ನು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಇನ್ನೆಷ್ಟು ದಿನ ಕಳೆಯಬೇಕು? ಇನ್ನೆಷ್ಟು ಕಸರತ್ತು ಮಾಡಬೇಕು? ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆಗೆ ವ್ಯಕ್ತವಾಗುತ್ತಿರುವ ವಿರೋಧವನ್ನೇ ನಿಭಾಯಿಸಲು ಸಾಧ್ಯವಾಗದೆ ಸುಸ್ತಾಗಿದೆಯೇ ಬಿಜೆಪಿ? ಎಂದು ವ್ಯಂಗ್ಯ ಮಾಡಿ ಪ್ರಶ್ನೆ ಮಾಡಿದೆ.

ವಿರೋಧ ಪ೦ಕ್ಷದ ನಾಯಕರಾಗಿ ಪದ್ಮನಾಭ ನಗರದ ಶಾಸಕ, ಮಾಜಿ ಸಚಿವ ಆರ್‌ ಅಶೋಕ್‌ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ವಿರೋಧ ಪರಿಷತ್‌ ನಾಯಕನ ಆಯ್ಕೆಯೂ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಮಾತ್ರವಲ್ಲದೇ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭಕ್ಕೂ ಎರಡು ದಿನಗಳ ಮೊದಲೇ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಿಟ್ಟಾಗಿದ್ದ ವರಿಷ್ಠರು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಆರು ತಿಂಗಳಾದರೂ ಆಯ್ಕೆ ಮಾಡಿರಲಿಲ್ಲ. ಇದು ಆಡಳಿತಾರೂಢ ಕಾಂಗ್ರೆಸ್‌ನಿಂದ ಟೀಕೆಗೂ ಒಳಗಾಗಿತ್ತು. ಬಿಜೆಪಿ ಇನ್ನೂ ಜಾತಿ ಲೆಕ್ಕಾಚಾರದಲ್ಲಿದೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!