spot_img
Wednesday, January 22, 2025
spot_img

ಸುಳ್ಳು ಹೇಳಿಕೆ ನೀಡಿದರೇ ಪ್ರತಿ ಉತ್ಪನ್ನಕ್ಕೆ 1 ಕೋಟಿ ದಂಡ ವಿಧಿಸುತ್ತೇವೆ…. : ʼಪತಂಜಲಿʼಗೆ ʼಸುಪ್ರೀಂʼ ವಾರ್ನ್‌

ಜನಪ್ರತಿನಿಧಿ ವಾರ್ತೆ :  ಯೋಗ ಗುರು ರಾಮದೇವ್‌ ನೇತೃತ್ವದ ಪತಂಜಲಿ ಆಯುರ್ವೇದ ಕಂಪನಿಯು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಕುರಿತು ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹಿರಾತುಗಳನ್ನು ನೀಡದಂತೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ.

ಅಲೋಪತಿ ಔಷಧಿಗಳನ್ನು ಗುರಿಯಾಗಿಸಿಕೊಂಡು ದಾರಿ ತಪ್ಪಿಸುವ ಜಾಹಿರಾತುಗಳನ್ನು ಪ್ರಕಟಿಸಿದ್ದರ ಬಗ್ಗೆ ಬಾಬಾ ರಾಮ್‌ ದೇವ್‌ ಮಾಲೀಕತ್ವದ ಪತಂಜಲಿ ಆಯುರ್ವೇದ ಕಂಪೆನಿಗೆ ಸುಪ್ರೀಂ ಕೋರ್ಟ್‌ ಖಡಕ್‌ ಎಚ್ಚರಿಕೆ ನೀಡಿದೆ.

ಜಾಹಿರಾತುಗಳಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುವ  ಮತ್ತು ಸತ್ಯಕ್ಕೆ ದೂರವಾದ ಸಂದೇಶಗಳು ಇರದಂತೆ ನೋಡಿಕೊಳ್ಳಬೇಕು  ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.

ದಾರಿ ತಪ್ಪಿಸುವ ಸಂದೇಶಗಳುಳ್ಳ ಪತಂಜಲಿಯ ಎಲ್ಲಾ ಜಾಹೀರಾತುಗಳನ್ನು ಈ ಕೂಡಲೇ ನಿಲ್ಲಿಸಬೇಕು. ಇದನ್ನು ನ್ಯಾಯಪೀಠ ತುಂಬಾ ಗಂಭೀರವಾಗಿ ಪರಿಗಣಸಲಿದೆ ಎಂದು ಹೇಳಿದೆ. ನಿಮ್ಮ ಉತ್ಪನ್ನಗಳು ಕೆಲವು ಕಾಯಿಲೆಗಳನ್ನು ಗುಣ ಪಡಿಸುತ್ತದೆ ಎಂದು ಸುಳ್ಳು ಮಾಹಿತಿಯನ್ನು ಜಾಹೀರಾತಿನಲ್ಲಿ ಹೇಳಿದ್ದರೇ ಬರೋಬ್ಬರಿ ಒಂದು ಕೋಟಿ ದಂಡ ವಿಧಿಸಬೇಕಾಗುತ್ತದೆ ಎಂದು ʼಪತಂಜಲಿʼಗೆ ಸುಪ್ರೀಂ ಕೋರ್ಟ್‌ ವಾರ್ನ್‌ ಮಾಡಿದೆ. ಮಾತ್ರವಲ್ಲದೇ ಪತ್ರಿಕೆಗಳಲ್ಲಿ ಹಾಗೂ ಮಾದ್ಯಮಗಳ್ಲಲಿ ಪ್ರಕಟ/ಪ್ರಸಾರವಾಗುವ ಜಾಹೀರಾತುಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳುವಂತೆ ಹೇಳಿದೆ.

ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ ಪತಂಜಲಿ ವಿರುದ್ಧ ದೂರು ದಾಖಲಿಸಿತ್ತು. ಪತಂಜಲಿ ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳನ್ನು ಎಲ್ಲಿಯೂ ಪರಿಶೀಲನೆ ಮಾಡಿಲ್ಲ. ಡ್ರಗ್ಸ್‌ ಅಂಡ್‌ ಅದರ್‌ ಮ್ಯಾಜಿಕ್‌ ರೆಮಿಡಿಸ್‌ ಆಕ್ಟ್‌ 1954 ಹಾಗೂ ಗ್ರಾಹಕ ರಕ್ಷಣ ಕಾಯ್ದೆ 2019ರ ಪ್ರಕಾರ ಇದು ಅಪರಾಧ ಎಂದು ಐಎಂಎ ವಾದಿಸಿದೆ.

ವಿಚಾರಣೆಯ ಸಂದರ್ಭದಲ್ಲಿ ಪೀಠವು, ಪತಂಜಲಿ ಆಯುರ್ವೇದಗೆ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ತಪ್ಪು ದಾರಿಗೆಳೆಯುವ ಹಕ್ಕುಗಳು ಮತ್ತ ಜಾಹೀರಾತುಗಳನ್ನು ಪ್ರಕಟಿಸದಂತೆ ಹೇಳಿದೆ.

ಒಂದು ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಸುಳ್ಳು ಹೇಳಿಕೆ ನೀಡಿದರೇ ಪ್ರತಿ ಉತ್ಪನ್ನಕ್ಕೆ 1 ಕೋಟಿ ದಂಡ ವಿಧಿಸುವುದನ್ನು ನ್ಯಾಯ ಪೀಠ ಪರಿಗಣಿಸಬಹುದು ಎಂದು ಹೇಳಿದೆ. ಕೆಲವು ಕಾಯಿಲೆಗಳಿಗೆ ಪರಿಪೂರ್ಣ ಚಿಕಿತ್ಸೆ ನೀಡುವ ಔಷಧಗಳ ಬಗ್ಗೆ ಹೇಳಿಕೊಳ್ಳಲಾಗುತಯ್ತಿರುವ  ತಪ್ಪು ವೈದ್ಯಕೀಯ ಜಾಹಿರಾತುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರದ ಪರ ಹಾಜರಾದ ವಕೀಲರನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!