Sunday, September 8, 2024

ನಮ್ಮ ಹುಡುಗರು ವಿಶ್ವಕಪ್‌ ಗೆಲ್ಲುತ್ತಿದ್ದರು… ಆ ʼಕೆಟ್ಟ ಶಕುನʼದಿಂದ…. : ರಾಹುಲ್‌ ಗಾಂಧಿ ಹೇಳಿದ್ದೇನು ?

ಜನಪ್ರತಿನಿಧಿ ವಾರ್ತೆ : ವಿಶ್ವಕಪ್‌ ಕ್ರಿಕೆಟ್‌ ನ ಪೈನಲ್‌ ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿದ ಬೆನ್ನಿಗೆ ಕ್ರಿಕೇಟ್‌ ಗೆ ರಾಜಕೀಯ ಅಂಟಿದೆ. ಟೀಂ ಇಂಡಿಯಾ ಸೋಲಿಗೆ ಆ ʼಕೆಟ್ಟ ಶಕುನʼವೇ ಕಾರಣ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜರೆದಿದ್ದಾರೆ.

ಸೋಲಿನ ನೋವಿನಲ್ಲಿರುವ ಟೀಂ ಇಂಡಿಯಾ ಆಟಗಾರರನ್ನು ಡ್ರೆಸ್ಸಿಂಗ್‌ ರೂಂ ನಲ್ಲಿ ಸಂತೈಸುತ್ತಿರುವ ಪ್ರಧಾನಿ ಮೋದಿಯವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವುದರ ನಡುವೆ ಕಾಂಗ್ರೆಸ್‌, ಬಿಜೆಪಿಗೆ ಸಾಮಾಜಿಕ ಜಾಲತಾಣದಲ್ಲಿಯೇ ತಿರುಗೇಟು ನೀಡಿದೆ. 2011ರಲ್ಲಿ ಕಾಂಗ್ರೆಸ್‌ ಸರ್ಕಾರ ಕೇಂದ್ರದಲ್ಲಿ ಆಡಳಿತದಲ್ಲಿರುವಾಗ ಟೀಂ ಇಂಡಿಯಾ ವಿಶ್ವಕಪ್‌ ಗೆದ್ದಿತ್ತು, ಕೇಂದ್ರದಲ್ಲಿ ಬಿಜೆಪಿ ಆಡಳಿತ ಇರುವಾಗ ಟೀಂ ಇಂಡಿಯಾ ಒಮ್ಮೆಯೂ ವಿಶ್ವಕಪ್‌ ಗೆದ್ದಿಲ್ಲ ಎಂದು ಜರೆದಿದೆ. (2011ರಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಕೂತು ಅಂದಿನ ಫೈನಲ್‌ ಪಂದ್ಯವನ್ನು ವೀಕ್ಷಿಸುತ್ತಿರುವ ಚಿತ್ರ ಮತ್ತು ಆದಿತ್ಯವಾರ(ನ.19) ನಡೆದ ಫೈನಲ್‌ ಪಂದ್ಯವನ್ನು ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ನೋಡುತ್ತಿರುವ ಫೋಟೋದೊಂದಿಗೆ ಕಾಂಗ್ರೆಸ್‌ ಪರವಾದ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹೀಗೆ ಟೀಕೆ ವೈರಲ್‌ ಆಗಿದೆ) ಈ ಹಿಂದೆ ಅಹಮದಾಬಾದ್‌ ನಲ್ಲಿ ಇತ್ತೀಚೆಗಿನ ವರ್ಷದಲ್ಲಿ ನಿರ್ಮಾಣ ಮಾಡಲಾಗಿದ್ದ ʼನರೇಂದ್ರ ಮೋದಿ ಸ್ಟೇಡಿಯಂʼ ಬಗ್ಗೆಯೂ ಕಾಂಗ್ರೆಸ್‌ ಆಕ್ರೋಶ ಹೊರ ಹಾಕಿತ್ತು. ಒಬ್ಬ ಪ್ರಧಾನಿ ಜೀವಂತ ಇರುವಾಗಲೇ ತನ್ನ ಹೆಸರಿನಲ್ಲೇ ಕ್ರಿಕೇಟ್‌ ಸ್ಟೇಡಿಯಂ ನಿರ್ಮಾಣ ಮಾಡಿಕೊಂಡಿರುವುದು ಹಾಸ್ಯಾಸ್ಪದ ಎಂದು ಟೀಕೆ ಮಾಡಿತ್ತು.

ಈಗ ಫೈನಲ್‌ ಪಂದ್ಯ ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದಿದ್ದು ಮತ್ತು ಪ್ರಧಾನಿ ನರೇಂದ್ರ ಮೋದಿ ಕ್ರಿಕೇಟ್‌ ನೋಡಲು ಬಂದಿದ್ದೇ ಟೀಂ ಇಂಡಿಯಾ ಸೋಲಿಗೆ ಕಾರಣ ಎಂಬಂತೆ ಪ್ರತಿಪಕ್ಷ ಕಾಂಗ್ರೆಸ್‌ ಈ ವಿಶ್ವಕಪ್‌ ಸೋಲನ್ನು ಬಿಂಬಿಸುತ್ತಿದೆ.

ಇಂದು(ಮಂಗಳವಾರ, ನ.21) ರಾಜಸ್ಥಾನದಲ್ಲಿ ನಡೆದ ಕಾಂಗ್ರೆಸ್‌ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿಶ್ವಕಪ್‌ ವಿಚಾರವನ್ನು ಪ್ರಸ್ತಾಪಿಸಿದ್ದು, ʼನಮ್ಮ ಹುಡುಗರು (ಟೀಂ ಇಡಿಯಾ) ವಿಶ್ವಕಪ್‌ ಗೆಲ್ಲುವ ಹಂತದಲ್ಲಿದ್ದರು, ನಮ್ಮ ಪ್ರಧಾನಿ ʼಕೆಟ್ಟ ಶಕುನʼದಂತೆ ಬಂದಿರುವುದರಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾದ ಎದುರು ಸೋಲುವಂತಾಯಿತುʼ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದ ಜಲೋರ್‌ ಎಂಬಲ್ಲಿ ನಡೆದ ಕಾಂಗ್ರೆಸ್‌ ನ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ವಯನಾಡ್‌ನ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಮೋದಿಯನ್ನು ಈ ರೀತಿಯಲ್ಲಿ ಟೀಕೆ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!