spot_img
Wednesday, January 22, 2025
spot_img

ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ಹತ್ತು ವರ್ಷಗಳಲ್ಲಿ ೫೦೦೦ ಕುಟುಂಬಗಳಿಗೆ ೨ ಕೋಟಿ ರೂ. ಆರ್ಥಿಕ ನೆರವು

ಕುಂದಾಪುರ ತಾಲೂಕು ಯುವ ಬಂಟರ ಸಂಘವು ಪ್ರಸ್ತುತ ವರ್ಷದಲ್ಲಿ ದಶಮ ಸಂಭ್ರಮವನ್ನು ಆಚರಿಸುತ್ತಿದ್ದು ೨೦೨೩ನೇ ವರ್ಷದ ಉಡುಪಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಂಘದ ವತಿಯಿಂದ ರೂಪಿಸಲಾದ ವಿವಿಧ ಯೋಜನೆಗಳಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ೫೦೦೦ ಕುಟುಂಬಗಳಿಗೆ ಒಟ್ಟು ಎರಡು ಕೋಟಿ ರೂಪಾಯಿ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ. ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳು, ವಿಕಲಚೇತನ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ವಿವಾಹ ನಿಗದಿಯಾದ ಯುವತಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರು, ಸರ್ಕಾರದ ಅಕ್ಷರ ದಾಸೋಹ ಯೋಜನೆಯ ಸಹಾಯಕಿಯರು, ವಸತಿ ಇಲ್ಲದವರು ಮೊದಲಾದವರನ್ನು ಒಳಗೊಂಡಂತೆ ಹಿಂದುಳಿದ ಮತ್ತು ಅವಕಾಶಗಳಿಂದ ವಂಚಿತರಾದ ಕುಟುಂಬಗಳು ವಿವಿಧ ಯೋಜನೆಗಳ ಪ್ರಯೋಜನ ಪಡೆದಿವೆ. ಮುಖ್ಯವಾಗಿ ದಶಮ ಸಂಭ್ರಮ ವರ್ಷದಲ್ಲಿ ಒಟ್ಟು ೨೦೦೦ ಕುಟುಂಬಗಳಿಗೆ ರೂ. ೧.೨೫ ಕೋಟಿ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸೇವೆಗೈದ ೨೦ ಮಂದಿ ಹಿರಿಯರಿಗೆ ದಶಮ ಸಂಭ್ರಮ ಪ್ರಶಸ್ತಿ, ೧೦ ಮಂದಿ ಸಾಧಕ ಮಹಿಳೆಯರಿಗೆ ಹೊಂಗಿರಣ ಪ್ರಶಸ್ತಿ ಹಾಗೂ ೧೦ ಮಂದಿ ಸಾಧಕ ಶಿಕ್ಷಕರಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೃಹತ್ ಮಟ್ಟದ ರಕ್ತದಾನ ಶಿಬಿರದೊಂದಿಗೆ ಹಸಿರು ಹೊನು ಯೋಜನೆಯ ಮೂಲಕ ಎಲ್ಲಾ ಸಮುದಾಯದ ಯುವಕ-ಯುವತಿಯರಿಗೆ ೧೦೦೦ ಗಿಡಗಳನ್ನು ಉಚಿತವಾಗಿ ವಿತರಿಸಲಾಗಿದೆ. ಮುಂದೆ, ದಶಮ ಸಂಭ್ರಮ ದ ನೆನಪಿಗಾಗಿ ಸಮುದಾಯದ ಹಿಂದುಳಿದವರಿಗೆ ಇನ್ನೂ ಒಂದು ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವ ಗುರಿ ಹೊಂದಲಾಗಿದೆ ಎಂಬುದಾಗಿ ಸಂಘದ ಗೌರವಾಧ್ಯಕ್ಷ ಬಿ. ಉದಯಕುಮಾರ್ ಶೆಟ್ಟಿ ಮತ್ತು ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!