Sunday, September 8, 2024

ಕುಂದಾಪ್ರ ಕನ್ನಡ ಭಾಷೆಯ ಸಿನಿಮಾಗಳು ಇನ್ನಷ್ಟು ನಿರ್ಮಾಣಗೊಳ್ಳಲಿ-ಅಭಿಲಾಷ್ ಶೆಟ್ಟಿ

ಕೋಟ :ಸಿನಿಮಾ ಕ್ಷೇತ್ರಕ್ಕೆ ಕರಾವಳಿ ಭಾಗದ ಜನರು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಷಯ, ಕುಂದಾಪ್ರ ಭಾಷೆಯ ಕಲಾತ್ಮಕ ಚಿತ್ರಗಳು ಇನ್ನಷ್ಟು ನಿರ್ಮಾಣವಾಗಿ, ಕುಂದಾಪ್ರ ಭಾಷೆಯ ಸೊಗಡು ವಿಶ್ವದಾದಂತ್ಯ ಪಸರಿಸಲಿ ಎಂದು ನಟ-ನಿರ್ದೇಶಕ ಅಭಿಲಾಷ್ ಶೆಟ್ಟಿ ಅವರು ಹೇಳಿದರು.

ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ)ಉಡುಪಿ, ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ(ರಿ)ಕೋಟ ಆಶ್ರಯದಲ್ಲಿ ಡಾ|| ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19 ನೇ ವರುಷದ ಸಂಭ್ರಮ ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂಪನ-೨೦೨೩ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಚಲನಚಿತ್ರ ಉತ್ಸವ,ಸಂವಾದ ಮಾತುಕತೆ ಹಾಗೂ ಕಾರಂತ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಶ್ರೀಮತಿ ಸುಶೀಲಾ ಸೋಮಶೇಖರ್ ಮಾತನಾಡಿ ನಾವಾಡುವ ಭಾಷೆಯ ಬಗ್ಗೆ ಕೀಳರಿಮೆ ಮೂಡಿಸಿಕೊಳ್ಳದೆ ಅವಕಾಶವಿದ್ದಾಗ ಎಲ್ಲ ಕ್ಷೇತ್ರಗಳಲ್ಲಿ ಅದನು ಬಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ದಿನೇಶ್, ಸದಸ್ಯರಾದ ಎಚ್. ಪ್ರಮೋದ ಹಂದೆ, ಸ.ಹಿ.ಪ್ರಾ.ಶಾಲೆ ಕೋಟತಟ್ಟು ಇಲ್ಲಿನ ಸಹಶಿಕ್ಷಕಿ ಶ್ರೀಮತಿ ಸಂಗೀತಾ ಎಸ್ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರವೀಂದ್ರ ಶೆಟ್ಟಿ ತಂತ್ರಾಡಿ ನಿರೂಪಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಪ್ರಸ್ತಾಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸ.ಹಿ.ಪ್ರಾ.ಶಾಲೆ ಕೋಟತಟ್ಟು ವಿದ್ಯಾರ್ಥಿಗಳಿಂದ ಕಾರಂತ ದರ್ಶನ ಹಾಗೂ ಕೋಳಿತಾಳ್ ಸಿನಿಮಾ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!