spot_img
Wednesday, January 22, 2025
spot_img

ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘದ ಮಹಾಸಭೆ


ಕುಂದಾಪುರ: ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘ (ನಿ ) ಗಂಗೊಳ್ಳಿ, ಇದರ ೨೦೨೨-೨೩ನೇ ಸಾಲಿನ ವಾರ್ಷಿಕ ಸರ್ವ ಸದ್ಯಸರ ಸಾಮಾನ್ಯ ಸಭೆ ಇತ್ತೀಚೆಗೆ ಶ್ರೀ ವಿರೇಶ್ವರ ಮಾಂಗಲ್ಯ ಮಂದಿರ ಗಂಗೊಳ್ಳಿಯಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ಲೀಲಾವತಿ ದುರ್ಗಾರಾಜ್ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿತು.

ಅಧ್ಯಕ್ಷಿಯ ಮಾತುಗಳನ್ನಾಡಿದ ಇವರು ಸಂಘವು ವರದಿ ವರ್ಷದಲ್ಲಿ ಉತ್ತಮವಾದ ಲಾಭ ಗಳಿಸಿದ್ದು ಸಹಕಾರಿ ಇಲಾಖೆಯ ಮಾರ್ಗದರ್ಶನ, ನಮ್ಮ ಸಹಕಾರಿ ಸಂಘದ ಸದಸ್ಯರ ಸಹಕಾರ, ಸಿಬ್ಬಂದಿಗಳ ಕಾರ್ಯ ದಕ್ಷತೆ ಮತ್ತು ಆಡಳಿತ ಮಂಡಳಿಯ ಉತ್ತಮವಾದ ಸಲಹೆ ಮತ್ತು ಆಡಳಿತದಿಂದ ಸಂಘವು ಉತ್ತಮ ಬೆಳವಣೆಗೆ ಕಾಣುವಂತಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಗೌರಿ ಅಣ್ಣಪ್ಪ ಬಿಲ್ಲವ, ನಿರ್ದೇಶಕರಾದ ಶಾರದಾ ಗೋವಿಂದ, ರಾಧಾ ಗೋಪಾಲ್, ಸುಶೀಲಾ ನಾರಾಯಣ, ವಸಂತಿ ಮುತ್ತ ಕುಂದರ್, ಕಮಲ ಎಸ್ ಜತ್ತನ್, ಲೀಲಾವತಿ ಎಸ್ ಜತ್ತನ್, ಶೋಭಾ ಕೃಷ್ಣ, ಲಲಿತಾ ವಿಶ್ವೇಶ್ವರ, ವನಜ ಸಂಜೀವ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಪೂಜಾರಿ ೨೦೨೨/೨೩ ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು, ಸಂಘದ ಸಿಬ್ಬಂದಿ ರಾಘವೇಂದ್ರ ಪೂಜಾರಿ ರವರು ರವರು ಸ್ವಾಗತಿಸಿ, ಸಂಘದ ಸಿಬ್ಬಂದಿ ಜ್ಯೋತಿ ರವರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!