spot_img
Wednesday, January 22, 2025
spot_img

ಅಭಿವೃದ್ದಿ ಎನ್ನುವುದು ಆರಂಭವಾಗುವುದು ಶಾಲೆಯಿಂದ-ಕೆ.ಜಯಪ್ರಕಾಶ್ ಹೆಗ್ಡೆ


ಕುಂದಾಪುರದಲ್ಲಿ ಶಿಕ್ಷಕರ ದಿನಾಚರಣೆ

ಕುಂದಾಪುರ, ಸೆ.5: ಅಭಿವೃದ್ಧಿ ಎನ್ನುವುದು ಪ್ರಾರಂಭವಾಗುವುದು ಶಾಲೆಯಿಂದ. ಪ್ರಾಥಮಿಕ ಹೆಜ್ಜೆ ಇಡಲು ಕಲಿಸುವ ಶಿಕ್ಷಕರು ಶಾಶ್ವತವಾಗಿ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿಯುತ್ತಾರೆ. ಹಾಗಾಗಿ ಶಿಕ್ಷಕರ ಹೊಣೆಗಾರಿಕೆ ಮಹತ್ತರವಾದುದು. ಶಾಲೆಗೆ ಮಗುವಿನ ದಾಖಲಾತಿಯ ಸಂದರ್ಭದಲ್ಲಿ ಜಾತಿಯನ್ನು ಸ್ಪಷ್ಟವಾಗಿ ನಮೋದಿಸಬೇಕು. ಪ್ರಾರಂಭದಲ್ಲಿ ಜಾತಿ ನಮೋದನೆ ಸರಿಯಾಗಿಲ್ಲದಿದ್ದರೆ ಮುಂದೆ ವಿದ್ಯಾರ್ಥಿ ಮೀಸಲಾತಿ ಸೌಲಭ್ಯ ಪಡೆಯುವಾಗ ಸಮಸ್ಯೆಯಾಗುತ್ತದೆ. ಈ ವಿಚಾರದಲ್ಲಿ ಕೂಡಾ ಶಿಕ್ಷಕರು ಗಮನ ಹರಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ದಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಇವರ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ಆದ್ಯತೆಗಳಾಗಿದ್ದು ಶಿಕ್ಷಣ ನೀತಿಯ ಬದಲಾವಣೆಯ ಸಂದರ್ಭದಲ್ಲಿ ಶಿಕ್ಷಕರ ಅಭಿಪ್ರಾಯವನ್ನು ಪರಿಗಣಿಸಬೇಕು. ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಮತದಾನದ ಹಕ್ಕು ಸಿಗುವಂತಾಗಬೇಕು. ಶಿಕ್ಷಣವೆಂದರೆ ಕೇವಲ ಅಕ್ಷರಾಭ್ಯಾಸ ಮಾತ್ರವಲ್ಲ. ಕ್ರೀಡೆ, ಕಲೆ ಎಲ್ಲವೂ ಒಳಗೊಂಡಿದೆ. ಮಕ್ಕಳ ಆಸಕ್ತಿಯನ್ನು ಪೋಷಕರು, ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಶ್ರೀಕಾಂತ ರಾವ್ ಸಿದ್ಧಾಪುರ, ಕಲಿಸುವುದರ ಜೊತೆ ಶಿಕ್ಷಕರು ಕಲಿಯುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವುದೆಂದರೆ ಜೀವಂತ ಕಡತ ಪತ್ರಗಳೊಂದಿಗೆ ಕೆಲಸ ಮಾಡಿದಂತೆ. ಪ್ರಾಯೋಗಿಕ ಜ್ಞಾನ ಮಕ್ಕಳೊಂದಿಗೆ ಬೆರೆತಾಗ ಬೇರೆಯದೆ ರೀತಿಯ ಅನುಭವವಾಗುತ್ತದೆ. ಜ್ಞಾನಕ್ಕೆ ಮಿಗಿಲಾದ ಸಂಪತ್ತಿಲ್ಲ. ಹಿಂದೆ ಭೌದ್ಧಿಕ ಸಾಮರ್ಥ್ಯವನ್ನೇ ಮಾನದಂಡವಾಗಿ ನೋಡಲಾಗುತ್ತಿದೆ. ಮದುವೆಯ ಸಮಯದಲ್ಲಿ ವರನ ಆಯ್ಕೆ ಸಂದರ್ಭ ವರನಿಗೆ ಜೈಮಿನಿ ಭಾರತ ನಿರರ್ಗಳವಾಗಿ ಹೇಳುವ ಸವಾಲು ನೀಡಲಾಗುತ್ತಿತ್ತು. ಹಿಂದಿನಿಂದಲೂ ಕೂಡಾ ಶಿಕ್ಷಣಕ್ಕೆ ಪ್ರಧಾನ ಒತ್ತು ನೀಡಲಾಗಿತ್ತು ಎಂದರು. ಇವತ್ತು ಮಕ್ಕಳ ಮನಸ್ಥಿತಿಯನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಜಾಗೃತೆ ವಹಿಸಬೇಕಾಗುತ್ತದೆ. ಸಾಂಸ್ಕೃತಿಕ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಎಂ. ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಸಂಘ ಕುಂದಾಪುರದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯಕ್, ಟೀಚರ್‍ಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನವೀನಚಂದ್ರ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್, ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಶಿಕ್ಷಕರ ಸಂಘಟನೆ ಅಧ್ಯಕ್ಷರುಗಳಾದ ಉದಯ ಕುಮಾರ್ ಶೆಟ್ಟಿ, ಗಣೇಶ ಕುಮಾರ್ ಶೆಟ್ಟಿ, ಜ್ಯೋತಿ, ಮೂರ್ತಿ ಎಂ.ಎಸ್., ಪ್ರದೀಪ್ ಭಂಡಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಮಂಜುನಾಥ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ನಿವೃತ್ತರಾದ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮೊದಲು ಶಿಕ್ಷಕರಿಂದ ಯಕ್ಷ ಗಾನ ವೈಭವ ನಡೆಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!