Sunday, September 8, 2024

ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿದ್ಕಲ್‌ಕಟ್ಟೆ ಒಕ್ಕೂಟ ಪದಗ್ರಹಣ

ಕುಂದಾಪುರ : ಅನಕ್ಷರಸ್ಥ ಗ್ರಾಮೀಣ ಮಹಿಳೆಯರು ಕೂಡಾ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಲು ಕಲಿಸಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಮಹಿಳೆಯರನ್ನು ಸಂಘಟಿಸಿ, ಅವರನ್ನು ಸ್ವಾವಲಂಬಿಗಳಾಗಿಸುವಲ್ಲಿ ಯಶಸ್ವಿಯಾದ ಯೋಜನೆ ಇದೀಗ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿ ಪಕ್ಕದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೂ ಪಾದಾರ್ಪಣೆ ಮಾಡಿದೆ. ಸಮಾಜದಲ್ಲಿ ಕಡೆಗಣಿಸಲ್ಪಟ್ಟವರನ್ನು‌ಇದು ಆದರಿಸಿದೆ. ಸರ್ಕಾರಿ, ಖಾಸಗಿ ರಂಗದ ಬ್ಯಾಂಕುಗಳು ಸಾಲ ಕೊಡಲು ನಿರಾಕರಿಸಿದವರಿಗೆ ಯೋಜನೆ ಆರ್ಥಿಕ ಬೆಂಬಲ ನೀಡಿ, ಅವರಿಗೆ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಸಹಕರಿಸಿದೆ ಎಂದು ಹಿರಿಯ ಧಾರ್ಮಿಕ ಮುಂದಾಳು, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿದ್ಕಲ್ಕಟ್ಟೆ ವಲಯದ ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿದ್ಕಲ್ ಕಟ್ಟೆ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ದಾಖಲೆಪತ್ರಗಳು ಮತ್ತು ಅಧಿಕಾರ ಹಸ್ತಾಂತರಿಸುವ ಮೂಲಕ ಪದಗ್ರಹಣವನ್ನು ನೆರವೇರಿಸಲಾಯಿತು.

ಯೋಜನಾ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಹಾರ್ದಳ್ಳಿ – ಮಂಡಳ್ಳಿ ಒಕ್ಕೂಟದ ಅಧ್ಯಕ್ಷೆ ರಮ್ಯಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿದ್ಕಲ್‌ಕಟ್ಟೆ ವಲಯ ಮೇಲ್ವಿಚಾರಕಿ ಪ್ರಮೀಳಾ ವಾರ್ಷಿಕ ವರದಿ ವಾಚಿಸಿದರು.

ವಲಯ ವ್ಯಾಪ್ತಿಯ ವಿವಿಧ ಒಕ್ಕೂಟಗಳ ಅಧ್ಯಕ್ಷರು, ಬಿದ್ಕಲ್‌ಕಟ್ಟೆ ವಲಯಾಧ್ಯಕ್ಷೆ ಪ್ರೇಮಾ ರಾಮ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿಗಳಾದ ಶೈಲಾ, ಪ್ರತಿಭಾ, ಪೂರ್ಣಿಮಾ, ಗಾಯತ್ರಿ, ವಾಣಿ, ಸುಕನ್ಯಾ, ಅಕ್ಷತಾ, ಶೋಭಾ, ಆಶಾ ಗಣ್ಯರನ್ನು ಗೌರವಿಸಿದರು.

ಶೌರ್ಯ ಮತ್ತು ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ರಾಮ್ ಕುಮಾರ್ ಸ್ವಾಗತಿಸಿದರು. ಘಟಕದ ಸದಸ್ಯರನ್ನು ಗೌರವಿಸಲಾಯಿತು. ಕುಂದಾಪುರ ತಾಲೂಕು ಯೋಜನಾಧಿಕಾರಿ ನಾರಾಯಣ ಪಾಲನ್, ಜನಜಾಗೃತಿ ವೇದಿಕೆ ನಿರ್ದೇಶಕಿ ಸುಲೇಖಾ ಶೆಟ್ಟಿ, ಶ್ರೀ ನಾಗಲಕ್ಷ್ಮೀ ಸಭಾಭವನ ಮಾಲೀಕ ರಾಘವೇಂದ್ರ ಅಡಿಗ ಶುಭ ಹಾರೈಸಿದರು. ವಲಯ ಮೇಲ್ವಿಚಾರಕರಾದ ಶರ್ಮಿಳಾ ಮತ್ತು ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು. ಸೇವಾಪ್ರತಿನಿಧಿ ಪೂರ್ಣಿಮಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!