spot_img
Wednesday, January 22, 2025
spot_img

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಗೋದಾಮು ಕಟ್ಟಡ ಉದ್ಘಾಟನೆ ಮತ್ತು ನೂತನ ಚಿತ್ತೂರು ಶಾಖೆ ಉದ್ಘಾಟನೆ


ವಂಡ್ಸೆ, ಮಾ.4: ಸಹಕಾರ ಸಂಘಗಳು ಸದಸ್ಯರ ಏಳ್ಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿವೆ. ಪಾರದರ್ಶಕವಾದ ಸೇವೆಯ ಮೂಲಕ ವಿಶ್ವಾಸ ಗಳಿಸಿವೆ. ಇವತ್ತು ಬೇರೆ ಬೇರೆ ಹಣಕಾಸು ಸಂಸ್ಥೆಗಳಿಗೆ ಹೋಲಿಸಿದರೆ ಸಹಕಾರ ಸಂಘಗಳು ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತಿವೆ. ಕಳೆದ 28 ವರ್ಷಗಳಲ್ಲಿ ಅವಿಭಜಿತ ದ.ಕ ಜಿಲ್ಲೆಯ ರೈತರು ಕೃಷಿಸಾಲವನ್ನು ಸರಿಯಾಗಿ ಮರುಪಾವತಿ ಮಾಡುವ ಮೂಲಕ ದೇಶದಲ್ಲಿ ಪ್ರಥಮ ಸ್ಥಾನದಲ್ಲಿವೆ. ಅವಿಭಜಿತ ಜಿಲ್ಲೆಯ ಸಹಕಾರ ಸಂಘಗಳು ಕೂಡಾ ಲಾಭದಾಯಕವಾಗಿ ಮುನ್ನೆಡೆಯುತ್ತಿದೆ. ಇದು ಸದಸ್ಯರು ಸಹಕಾರ ವ್ಯವಸ್ಥೆಯ ಮೇಲಿಟ್ಟಿರುವ ವಿಶ್ವಾಸದ ಸಂಕೇತ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಹೇಳಿದರು.

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ., ವಂಡ್ಸೆ ಇದರ ಗೋದಾಮು ಕಟ್ಟಡ ಉದ್ಘಾಟನೆ ಮತ್ತು ನೂತನ ಚಿತ್ತೂರು ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ನೂತನ ಚಿತ್ತೂರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ಇವತ್ತು ಆರು ಗ್ರಾಮಗಳ ವ್ಯಾಪ್ತಿಯಲ್ಲಿ ನಾಲ್ಕು ಶಾಖೆಗಳ ಮೂಲಕ ಸೇವೆ ನೀಡುತ್ತಿದೆ. ಸರ್ಕಾರದ ಸಾಲಮನ್ನಾ ಆದಾಗ ಈ ಸಂಘದ ವ್ಯಾಪ್ತಿಯಲ್ಲಿ 6.5 ಕೋಟಿ ಸಾಲಮನ್ನವಾಗಿದೆ ಎಂದ ಅವರು, ಕೃಷಿಕರು ಇವತ್ತು ಸಂಪೂರ್ಣ ಅಡಿಕೆ ಕೃಷಿಯತ್ತಲೇ ಅವಲಂಬಿತವಾಗುತ್ತಿರುವುದನ್ನು ಕಾಣುತ್ತೇವೆ. ಬೇರೆ ಬೇರೆ ಕೃಷಿಯನ್ನೂ ಕೂಡ ರೈತರು ಮಾಡಬೇಕು. ಏಕರೂಪದ ಕೃಷಿಯನ್ನೇ ಅನುಕರಣೆ ಮಾಡಬಾರದು ಎಂದರು.

ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಗೋದಾಮು ಕಟ್ಟಡ ಉದ್ಘಾಟಿಸಿ ಸಾಲ ಪಡೆಯುವಾಗ ಎಷ್ಟು ಪ್ರೀತಿಯಿಂದ ಪಡೆಯುತ್ತೆವೋ ಸಾಲ ಮರುಪಾವತಿ ಮಾಡುವಾಗಲೂ ಕೂಡಾ ಆ ಪ್ರೀತಿ ಇರಬೇಕು. ಸಹಕಾರ ಸಂಘಗಳಲ್ಲಿ ಸಮರ್ಪಕವಾಗಿ ಮರುಪಾವತಿ ಆಗಬೇಕು. ಸಾಲವನ್ನು ಕ್ರಮಬದ್ಧವಾಗಿ ಮರುಪಾವತಿ ಮಾಡಬೇಕು ಎಂದರು.

ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟರು ಸಂಘವನ್ನು ಬಹಳಷ್ಟು ಉತ್ತುಂಗಕ್ಕೇರಿಸಿದ್ದಾರೆ. ಈ ಭಾಗದ ಬಲಾಢ್ಯ ಸಹಕಾರ ಸಂಘವಾಗಿ ಬೆಳೆದಿದೆ. ಈ ಸಂಘವನ್ನು ಆರಂಭಿಸಿ, ಮುನ್ನೆಡೆಸಿದ ಎಲ್ಲರ ಶ್ರಮವೂ ಶ್ಲಾಘನಾರ್ಹ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಅಧ್ಯಕ್ಷೀಯ ಮಾತನಾಡಿ, ನಮ್ಮೀ ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘವು 65 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ ಯಶಪ್ರದವಾಗಿ ಮುನ್ನೆಡೆಯುತ್ತಿದೆ. ಸಂಘದಲ್ಲಿ ಒಟ್ಟು 5454 ಸದಸ್ಯರಿದ್ದು 2,60,43,505 ಪಾಲು ಹಣವನ್ನು ಹೊಂದಿದೆ. ಸಂಘವು 41 ಕೋಟಿ ವಿವಿಧ ಠೇವಣಾತಿ, 6,31 ಲಕ್ಷ ರೂ.ಕಾಯ್ದಿರಿಸಿದ ನಿಧಿ, 71 ಕೋಟಿ ರೂ.ಸಾಲ ನೀಡಿದ್ದು, ಅದರಲ್ಲಿ 25 ಕೋಟಿ ಶೂನ್ಯ ಬಡ್ಡಿದರದ ಕೃಷಿಸಾಲ, 3% ಬಡ್ಡಿಯಲ್ಲಿ ಕೃಷಿ ಅಭಿವೃದ್ದಿ ಸಾಲ ನೀಡಲಾಗಿದೆ. 6ಸಾವಿರಕ್ಕೂ ಹೆಚ್ಚು ಮಂದಿಯನ್ನು ಯಶಸ್ವಿನಿ ಯೋಜನೆಯಡಿ ನೋಂದಣಿ ಮಾಡಲಾಗಿದೆ ಎಂದರು.

ಸಂಘವು ವಂಡ್ಸೆಯಲ್ಲಿ ಪ್ರಧಾನ ಕಛೇರಿ ಹೊಂದಿದ್ದು, ಕೆರಾಡಿ ಮತ್ತು ಇಡೂರು ಕುಂಜ್ಞಾಡಿಯಲ್ಲಿ ಪೂರ್ಣ ಪ್ರಮಾಣದ ಶಾಖೆಗಳನ್ನು ಹೊಂದಿದೆ. ಈಗ ಚಿತ್ತೂರಿನಲ್ಲಿ ಪೂರ್ಣಪ್ರಮಾಣದ ಶಾಖೆ ಉದ್ಘಾಟನೆಗೊಳ್ಳುತ್ತಿದೆ. ಸಂಘದ ನೂತನ ಗೋದಾಮುವಿನಲ್ಲಿ ಕ್ಯಾಂಪ್ಕೋ ಅವರ ವತಿಯಿಂದ ಶೀಘ್ರ ಅಡಿಕೆ ಖರೀದಿ ಕೇಂದ್ರ ಸ್ಥಾಪನೆ ಆಗಲಿದೆ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ರಾಜು ಪೂಜಾರಿ, ಎಮ್.ಮಹೇಶ ಹೆಗ್ಡೆ ಮೊಳಹಳ್ಳಿ, ದೇವಿಪ್ರಸಾದ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ ಸಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ಹೊಸೂರು, ನಿರ್ದೇಶಕರಾದ ಕೆ.ಭುಜಂಗ ಶೆಟ್ಟಿ ಕೆರಾಡಿ, ಐ.ಗೋವರ್ದನ್ ಶೆಟ್ಟಿ ಇಡೂರು, ಬಿ.ರಾಮ ಹೊಸೂರು, ಸಂಜೀವ ಪೂಜಾರಿ ವಂಡ್ಸೆ, ಎ.ಜಯರಾಮ ಶೆಟ್ಟಿ ವಂಡ್ಸೆ, ಶೀನಪ್ಪ ಶೆಟ್ಟಿ ಹೊಸೂರು, ಕೃಷ್ಣಯ್ಯ ಆಚಾರ್ ಚಿತ್ತೂರು, ಶ್ರೀಮತಿ ಕಸ್ತೂರಿ ಎಸ್.ಶೆಟ್ಟಿ ಚಿತ್ತೂರು, ರಾಜೇಶ ಶೆಟ್ಟಿ ಚಿತ್ತೂರು, ಸುನೀಲ್ ನಾಯ್ಕ್ ಕೆರಾಡಿ, ಶ್ರೀಮತಿ ನಾಗರತ್ನ ಶೆಟ್ಟಿ ಹೊಸೂರು, ಕೆ.ಶೇಖರ ಶೆಟ್ಟಿ ಬೆಳ್ಳಾಲ, ಶಿವಪ್ಪ ಶೆಟ್ಟಿ ಇಡೂರು, ವಲಯ ಮೇಲ್ವಿಚಾರಕ ಉದಯ ಶೆಟ್ಟಿ ಎ ಉಪಸ್ಥಿತರಿದ್ದರು.

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಜಿ.ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!