spot_img
Wednesday, January 22, 2025
spot_img

ಹಿಂದುಳಿದ ಮೊಗವೀರ ಸಮಾಜ ಮುನ್ನೆಲೆಗೆ ಬರುವಲ್ಲಿ ಜಿ.ಶಂಕರ್ ನಾಯಕತ್ವ ಮಹತ್ವದ್ದು-ಜಯಪ್ರಕಾಶ್ ಹೆಗ್ಡೆ


ಕುಂದಾಪುರದಲ್ಲಿ ಹವಾನಿಯಂತ್ರಿತ ಮೊಗವೀರ ಭವನ ಲೋಕಾರ್ಪಣೆ

ಕುಂದಾಪುರ: ಹಿಂದುಳಿದಿದ್ದ ಮೊಗವೀರ ಸಮಾಜ ಇವತ್ತು ಡಾ.ಜಿ.ಶಂಕರ್ ಅವರ ನಾಯಕತ್ವದಲ್ಲಿ ಮುನ್ನೆಡೆ ಕಂಡುಕೊಂಡಿದೆ. ಮೊಗವೀರ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸ ಇವತ್ತು ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯ ಸೂಚನೆಯಾಗಿದೆ. ಸಮಾಜದ ಅಗತ್ಯತೆಗಳನ್ನು ಗುರುತಿಸಿ ಸರ್ಕಾರದ ಮುಂದಿಟ್ಟು ಸಮಾಜವನ್ನು ಮುನ್ನೆಡೆಸುವ ಕೆಲಸ ಇವತ್ತು ಜಿ.ಶಂಕರ್ ನೇತೃತ್ವದಲ್ಲಿ ಆಗುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮೊಗವೀರ ಮಹಾಜನ ಸೇವಾ ಸಂಘ ಮುಂಬೈ, ಕುಂದಾಪುರ ಶಾಖೆ ನೇತೃತ್ವದಲ್ಲಿ ಕುಂದಾಪುರದ ಚಿಕನ್‌ಸಾಲ್ ರಸ್ತೆಯಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಸಭಾಭವನ ನಿರ್ಮಾಣವಾದ ಮೊಗವೀರ ಭವನ ಉದ್ಘಾಟಿಸಿ ಮಾತನಾಡಿದರು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಗೌರವಾಧ್ಯಕ್ಷರು ಆಗಿರುವ ನಾಡೋಜ ಡಾ|ಜಿ.ಶಂಕರ್ ಮಾತನಾಡಿ, ಬಗ್ವಾಡಿ ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ಸಂಖ್ಯೆಯ ಬಡವರಿದ್ದಾರೆ. ಅವರಿಗೆ ನನ್ನ ಸಂಪೂರ್ಣ ಸಹಕಾರವಿದೆ. ಈ ಭಾಗಕ್ಕೆ ಅತ್ಯಂತ ಅಗತ್ಯವಾಗಿದ್ದ ಸಕಲ ಸೌಕರ್ಯಗಳನ್ನು ಹೊಂದಿರುವ ಮೊಗವೀರ ಭವನ ಲೋಕಾರ್ಪಣೆಗೊಂಡಿದೆ. ಇದರಲ್ಲಿ ಸಮಾಜದ ಪ್ರತಿಯೋರ್ವರ ಬೆವರ ಹನಿಯೂ ಇದೆ. ಈ ಮೊಗವೀರ ಭವನದಿಂದ ಬರುವ ಆದಾಯವನ್ನು ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಗುರಿಕಾರರಿಗೆ ಗೌರವಧನಕ್ಕೆ ವಿನಿಯೋಗಿಸಲಾಗುವುದು ಎಂದು ಹೇಳಿದ ಅವರು, ಈಗಾಗಲೇ ಮೊಗವೀರ ಸಮಾಜಕ್ಕೆ ಸೇರಿರುವ 11 ಸಭಾಭವನಗಳು ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಸಭಾ ಭವನ ನಿರ್ಮಾಣವಾಗಬೇಕು. ಹಾಗೂ ಬಗ್ವಾಡಿ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರ 2 ಕೋಟಿ ಅನುದಾನ ಒದಗಿಸಬೇಕು. ಶಾಸಕರು ಆ ನಿಟ್ಟಿನಲ್ಲಿ ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಲುಪಿಸಬೇಕು. ಬಗ್ವಾಡಿ ಶಕ್ತಿ ಕೇಂದ್ರ ಭಕ್ತಿಕೇಂದ್ರವಾಗಿ ಬೆಳೆಯಬೇಕು ಎಂದರು.

ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮೊಗವೀರ ಸಮಾಜ ಪ್ರಾಮಾಣಿಕತೆ, ಪರಿಶ್ರಮ, ದೈವಭಕ್ತಿಗೆ ಹೆಸರಾದವರು. ಇವತ್ತು ಜಿ.ಶಂಕರ್ ಅವರ ಮೂಲಕ ಮೊಗವೀರ ಸಮಾಜ ಉಚ್ಚ್ರಾಯ ಸ್ಥಿತಿಗೆ ಬಂದಿದೆ. ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉದ್ಯಮಿ ಆನಂದ್ ಸಿ.ಕುಂದರ್, ದ.ಕ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮುಂಬೈ ಉದ್ಯಮಿ ಗೋಪಾಲ ಎಸ್.ಪುತ್ರನ್, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ|ಉಮೇಶ ಪುತ್ರನ್, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ ಅಮೀನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಹಿರಿಯಡಕ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಭಾಗವಹಿಸಿದ್ದರು.

ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಮೊ.ಮ.ಸೇ.ಸಂ.ಬಗ್ವಾಡಿ ಹೋಬಳಿ ಮುಂಬೈ ಇದರ ಮಾಜಿ ಅಧ್ಯಕ್ಷರಾದ ರಮೇಶ ಬಂಗೇರ, ಮಹಾಬಲ ಎಂ.ಕುಂದರ್, ಎನ್.ಎಚ್ ಬಗ್ವಾಡಿ, ಎನ್.ಡಿ ಚಂದನ್, ಕರುಣಾಕರ ಜಿ.ಪುತ್ರನ್, ಎಂ.ವಿ.ಹೊಳ್ಮಗೆ, ನಾಗೇಶ್ ಎನ್.ಪುತ್ರನ್, ರತ್ನಾಕರ ಎನ್.ನಾಯ್ಕ್, ಮೊ.ಮ.ಸೇ.ಸಂ.ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರಾದ ಕೆ.ಕೆ ಕಾಂಚನ್, ಎಂ.ಎಂ.ಸುವರ್ಣ, ಬಿ.ಹೆರಿಯಣ್ಣ, ಶಿವರಾಮ ಪುತ್ರನ್, ಮಂಜುನಾಯ್ಕ್ ಗುಜ್ಜಾಡಿ, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಚೇತನ್ ಜಿ., ಶಿವಮೊಗ್ಗ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಣ್ಣಪ್ಪ, ಸಾಗರ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಚಂದ್ರ ಮೊಗವೀರ, ತೀರ್ಥಹಳ್ಳಿ ಮೊ.ಮ. ಸಂಘದ ಅಧ್ಯಕ್ಷ ಸಂಪುಗುಡ್ಡೆ ರಾಘವೇಂದ್ರ, ಚಿಕ್ಕಮಗಳೂರು ಮೊ.ಮ.ಸಂಘದ ಅಧ್ಯಕ್ಷ ಬಿ.ನಾರಾಯಣ, ಕರಾವಳಿ ಮೊ.ಸಂ.ಅಧ್ಯಕ್ಷ ರತ್ನಾಕರ ಕುಂದಾಪುರ, ಮೊಗವೀರ ಸ್ತ್ರೀಶಕ್ತಿ ಬಗ್ವಾಡಿ ಹೋಬಳಿ ಅಧ್ಯಕ್ಷೆ ಸುಮಿತ್ರಾ ಅನಂದ ಮೊಗವೀರ, ಬೆಂಗಳೂರು ಉದ್ಯಮಿಗಳಾದ ಶಂಕರ್ ಕುಂದರ್, ಬಸವರಾಜ್, ನಾರಾಯಣ ರಾವ್, ನರಸಿಂಹ ಬಿ.ಎನ್.ಬೀಜಾಡಿ, ಸುಧಾಕರ ಕಾಂಚನ್, ಹೆಮ್ಮಾಡಿ ಮೀ.ಪ್ರಾ.ಸ.ಸಂಘದ ಅಧ್ಯಕ್ಷ ಭಾಸ್ಕರ ಕೆ.ನಾಯ್ಕ, ಬೀಜಾಡಿ ಮೀ.ಪ್ರಾ.ಸ.ಸಂಘದ ಅಧ್ಯಕ್ಷೆ ರತ್ನ ಮೊಗವೀರ, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ.ನಾಯ್ಕ ಚಾತ್ರಬೆಟ್ಟು, ಬೈಂದೂರು ಘಟಕದ ಅಧ್ಯಕ್ಷ ರವಿರಾಜ ಚಂದನ್ ಕಳುವಾಡಿ, ಕುಂದಾಪುರ ಘಟಕದ ಅಧ್ಯಕ್ಷ ಚಂದ್ರಹಾಸ ಕೋಣಿ, ಹೆಮ್ಮಾಡಿ ಘಟಕದ ಅಧ್ಯಕ್ಷ ಲೋಹಿತಾಶ್ವ ಆರ್.ಕುಂದರ್, ಹಾಲಾಡಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಕುಂದಾಪುರ ಶಾಖಾ ಕಾರ್ಯದರ್ಶಿ ಪ್ರಭಾಕರ ಎನ್.ಮೊಗವೀರ , ಕೋಶಾಧಿಕಾರಿ ಸುಧಾಕರ ಕಾಂಚನ್ ಉಪಸ್ಥಿತರಿದ್ದರು.

ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿದರು. ಚಿನ್ಮಯ್ ಕಾಂಚನ್ ಬಟ್ಟೆಕುದ್ರು ಪ್ರಾರ್ಥನೆ ನೆರವೇರಿಸಿದರು. ಆರ್.ಜೆ ನಯನ ಕಾರ್ಯಕ್ರಮ ನಿರ್ವಹಿಸಿ, ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಗೌರವ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಂ.ನಾಯ್ಕ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ತನಕ ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇದರ ನಿರ್ದೇಶಕಿ ವಿದುಷಿ ಶ್ರೀಮತಿ ಪ್ರವಿತಾ ಅಶೋಕ್ ಅವರ ಶಿಷ್ಯವೃಂದದವರಿಂದ ನೃತ್ಯ ಸಿಂಚನ, ಮಧ್ಯಾಹ್ನ ಗಣೇಶ ಎರ್ಮಾಳ್ ಮತ್ತು ಬಳಗದವಿಂದ ಸುಗಮ ಸಂಗೀತ, ಗ್ರೂಪ್ x ಡಾನ್ಸ್ ಅಕಾಡೆಮಿ, ಸುರತ್ಕಲ್ ಇವರಿಂದ ಜಾನಪದ ಹಾಗೂ ಸಿನಿಮಾ ನೃತ್ಯ ಸಂಗಮ, ಡ್ರಾಮಾ ಜ್ಯೂನಿಯರ್ ವಿಜೇತೆ ಕು|ಸಮೃದ್ಧಿ ಇವರಿಂದ ಯಕ್ಷ ನೃತ್ಯ, ಕಾಂಚನಿ ಕಲಾಕೇಂದ್ರ ಮುಂಬೈ ಇವರ ಪ್ರಾಯೋಜಕತ್ವದಲ್ಲಿ ಭಾಗವತ ಸದಾಶಿವ ಅಮೀನ್ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ದಾನಶೂರ ಕರ್ಣ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!