Friday, April 19, 2024

ಸೌಕೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ

ಸೌಕೂರು: ಪುಷ್ಪ ಪವಾಡ ಖ್ಯಾತಿಯ ಸೌಕೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ನ.22ರಂದು ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ ಸಾಮೂಹಿಕ ಹೋಮ, ಮಧ್ಯಾಹ್ನ ವಿಶೇಷ ಮಹಾಪೂಜೆ, ಪರಿವಾರ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ 7 ಗಂಟೆಗೆ ರಂಗಪೂಜೆ, ಕಾರ್ತಿಕ ದೀಪೋತ್ಸವ, ಪುಷ್ಪ ರಥೋತ್ಸವ, ಅಷ್ಟವದಾನ ಸೇವೆ, ರಥಬೀದಿ ಉತ್ಸವ ನಡೆಯಿತು. ಭಕ್ತಾದಿಗಳಿಗೆ ರಾತ್ರಿ ಅನ್ನ ಸಂತರ್ಪಣೆ ನಡೆಯಿತು. ವಿವಿಧ ಭಜನಾ ತಂಡದವರಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಸಮಿತಿ ಸದಸ್ಯರಾದ ಎಸ್. ಅನಂತ ಅಡಿಗ, ಕುಪ್ಪ ಸೌಕೂರು, ಶ್ರೀಮತಿ ರೀತಾ ದೇವಾಡಿಗ, ಶ್ರೀಮತಿ ಆಶಾ ಸಂತೋಷ, ಕೆ. ಸುಬ್ಬಣ್ಣ ಶೆಟ್ಟಿ ಕೆಂಚನೂರು, ಜಯರಾಮ್ ಶೆಟ್ಟಿ ಹಡಾಳಿ, ಉಮೇಶ್ ಮೊಗವೀರ, ಶೇಖರ್ ಪೂಜಾರಿ ಗುಲ್ವಾಡಿ, ಪ್ರಧಾನ ಅರ್ಚಕರು ಹಾಗೂ ಪರ್ಯಾಯ ಅರ್ಚಕರು ಮತ್ತು ಸಿಬ್ಬಂದಿ ವರ್ಗ, ದೇವಳಕ್ಕೆ ಸಂಬಂಧಪಟ್ಟ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಬಾರಿ ಕಾರ್ತಿಕ ದೀಪೋತ್ಸವ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಬೇರೆ ಬೇರೆ ಭಾಗದಿಂದಲೂ ಭಕ್ತಾಧಿಗಳು ಆಗಮಿಸಿ ಶ್ರೀದೇವಿಗೆ ದೀಪ ಬೆಳಗಿ ಪುನೀತರಾದರು. ಕಾರ್ತಿಕ ದೀಪೋತ್ಸವ ಹಬ್ಬದ ವಾತಾವರಣವನ್ನೇ ನಿರ್ಮಿಸಿತ್ತು. ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!