spot_img
Wednesday, January 22, 2025
spot_img

ಸುಜಯೀಂದ್ರ ಹಂದೆಯವರಿಗೆ ರಾಜ್ಯೋತ್ಸವ ಗೌರವ

ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಶಿಯೇಷನ್ (ರಿ.) ದ.ಕ., ಉಡುಪಿ ಜಿಲ್ಲೆ, ಕುಂದಾಪುರ ಮತ್ತು ಬೈಂದೂರು ವಲಯವು, ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ, ಗೌರವಿಸಿ ನೀಡಲಾದ ರಾಜ್ಯೋತ್ಸವ ಪುರಸ್ಕಾರಕ್ಕೆ ಸುಜಯೀಂದ್ರ ಹಂದೆ ಕೋಟ ಭಾಜನರಾಗಿದ್ದಾರೆ.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹಂದೆಯವರು ಯಕ್ಷಗಾನದ ಆಟಕೂಟಗಳಲ್ಲಿ ಪ್ರಸಿದ್ಧ ಕಲಾವಿದರು. ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರು. ಕುಂದಾಪುರ ಗಮಕಕಲಾ ಪರಿಷತ್ತಿನ ಅಧ್ಯಕ್ಷರು. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಬರಹಗಳು ಪ್ರಕಟವಾಗಿದೆ. ವಿವಿಧ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರೀಯರು. ಬೆಹರಿನ್, ಕುವೈಟ್, ಲಂಡನ್, ಮೆಂಚೆಸ್ಟರ್‌ಗಳಲ್ಲಿ ಯಕ್ಷಗಾನದ ಕಂಪು ಪಸರಿಸಿದವರು. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಹಿತ್ಯ, ಕಲೆ, ಜೀವನ ಮೌಲ್ಯ, ಸಂವಹನ ಕೌಶಲ್ಯಗಳ ಕುರಿತು ಉಪನ್ಯಾಸ ನೀಡಿದವರು. ಬಂಜೆ ಹೆತ್ತ ನೋವು ಕವನ ಸಂಕಲನಕ್ಕೆ ಮುಂಬೈನ ಪೇಜಾವರ ಸದಾಶಿವ ರಾವ್ ಪ್ರಶಸ್ತಿ ಅಲ್ಲದೇ ದೇಶ ಮತ್ತು ವಿದೇಶಗಳಲ್ಲಿ ಅನೇಕ ಸನ್ಮಾನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!