spot_img
Sunday, April 12, 2026
spot_img

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಚಿನ್ ಶೆಟ್ಟಿಯವರಿಗೆ ನವಶಕ್ತಿ ಮಹಿಳಾ ವೇದಿಕೆಯಿಂದ ಅಭಿನಂದನೆ

ಕೊಲ್ಲೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹುಂಚನಿ ಸಚಿನ್ ಕುಮಾರ್ ಶೆಟ್ಟಿ ಅವರನ್ನು ಕೊಲ್ಲೂರು ನವಶಕ್ತಿ ಮಹಿಳಾ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಹಾಗೂ ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷರಾದ ಗ್ರೀಷ್ಮಾ ಗಿರಿಧರ್ ಭಿಡೆ ಅಭಿನಂದನಾ ಮಾತನಾಡಿ ಶಿಕ್ಷಕ ವೃತ್ತಿಯು ಪವಿತ್ರವಾದ ವೃತ್ತಿಯಾಗಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ದುಡಿಯುವ ಶಿಕ್ಷಕರಿಗೆ ಶುಭವಾಗಲಿ, ಶಿಕ್ಷಕರು ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿನ್ ಕುಮಾರ್ ಶೆಟ್ಟಿ ಪ್ರಶಸ್ತಿ ಪಡೆಯುವುದಕ್ಕಿಂತ ಪ್ರಶಸ್ತಿಯ ಗೌರವ ಉಳಿಸಿಕೊಳ್ಳುವುದು ಮುಖ್ಯ. ಪ್ರಶಸ್ತಿ ಸನ್ಮಾನಗಳು ಬಂತೆಂದರೆ ನಮ್ಮ ಜವಾಬ್ದಾರಿ ಹೆಚ್ಚಿದೆ ಅಂತ ಅರ್ಥ ಎಂದರು.

ಕಾರ್ಯಕ್ರಮದಲ್ಲಿ ನವಶಕ್ತಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ರತ್ನ, ಕಾರ್ಯದರ್ಶಿ ಜ್ಯೋತಿ ರಾಘವೇಂದ್ರ ಹಾಗೂ ಸದಸ್ಯರಾದ ಸುಗುಣ, ಉಷಾ, ಜಯಂತಿ, ಯಶೋದ, ರೂಪ ಭಟ್, ಮಮತಾ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್ ಭಟ್ ಉಪಸ್ಥಿತರಿದ್ದರು.

ಸಂಗೀತ ಕಾರ್ಯಕ್ರಮ ಸ್ವಾಗತಿಸಿದರು, ಸುಷ್ಮಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!