spot_img
Sunday, April 12, 2026
spot_img

ಪ್ರಕೃತಿ ವಿಕೋಪದಡಿ ರೂ. 41 ಲಕ್ಷ ಪರಿಹಾರ, ಕಾಲುಸಂಕಗಳ ನಿರ್ಮಾಣಕ್ಕೆ ವಿಶೇಷ ಆಧ್ಯತೆ, ಎನ್.ಎಚ್‌ನ 5 ಕಡೆ ಅಂಡಾರ್ ಪಾಸ್‌ಗೆ ಪ್ರಸ್ತಾವನೆ-ಸಂಸದ ಬಿ.ವೈ.ರಾಘವೇಂದ್ರ

ಕೊಲ್ಲೂರು, ಆ.25: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬೈಂದೂರು ಕ್ಷೇತ್ರದ ಅಭಿವೃದ್ದಿಯ ಸಂಕಲ್ಪದಂತೆ ಕಾಮಗಾರಿ ನಡೆದ ಬಗ್ಗೆ ಸಮಾಧಾನವಿದೆ. ಈಗಾಗಲೇ ಕ್ಷೇತ್ರಕ್ಕೆ ರೂ 1,531 ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿವೆ. ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಿಗೆ ರೂ. 41,68,200 ಪರಿಹಾರ ನೀಡಲಾಗಿದೆ. ಇನ್ನೂ ಹಲವಾರು ಕಾಮಗಾರಿಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಮಂಜೂರಾತಿಯಾಗಿದ್ದು ಶೀಘ್ರ ಶಂಕುಸ್ಥಾಪನೆಯಾಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಕೊಲ್ಲೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೈಂದೂರು ಕ್ಷೇತ್ರದಲ್ಲಿ 250 ಕಾಲುಸಂಕಗಳನ್ನು ಪಟ್ಟಿ ಮಾಡಲಾಗಿದ್ದು ಶಾಸಕರು ಈಗಾಗಲೇ 10 ಕೋಟಿ ಹಣವನ್ನು ಲೋಕೋಪಯೋಗಿ ಇಲಾಖೆಯ ಮೂಲಕ 100 ಕಾಲುಸಂಕಗಳಿಗೆ 5 ಕೋಟಿ ಹಣವನ್ನು ಮಂಜೂರಾತಿಯಾಗಿದೆ. ಕ್ಷೇತ್ರದಲ್ಲಿ ಆದ್ಯತೆಯ ಮೇರೆಗೆ 172 ಕಾಲುಸಂಕಗಳ ನಿರ್ಮಾಣಕ್ಕೆ ರೂ 20 ಕೋಟಿ ರೂಪಾಯಿ ಅವಶ್ಯಕತೆ ಇದ್ದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣಕ್ಕೆ ಟೆಂಡರ್:
ಕ್ಷೇತ್ರದಲ್ಲಿ ಶುದ್ದ ಕುಡಿಯುವ ನೀರಿನ ಯೋಜನೆ 596 ಕೋಟಿ ಮಂಜೂರಾಗಿದ್ದು 40 ಗ್ರಾ.ಪಂ. ಹಾಗೂ ಬೈಂದೂರು ಪ.ಪಂ. ವ್ಯಾಪ್ತಿಯ ಒಟ್ಟು 848ಮನೆಗಳಿಗೆ ನೀರು ತಲುಪಿಸುವ ಯೋಜನೆಗೆ ಟೆಂಡರ್ ಆಗಿದೆ. ಮರವಂತೆಯಲ್ಲಿ ಹೊರಬಂದರು ನಿರ್ಮಾಣ ಎರಡನೇ ಹಂತದ ಕಾಮಗಾರಿಗೆ ರೂ 85 ಕೋಟಿ ಮಂಜೂರಾಗಿ ಟೆಂಡರ್ ಆಗಿದೆ. ರೂ. 218 ಕೋಟಿ ವೆಚ್ಚದಲ್ಲಿ ಬೈಂದೂರು-ರಾಣೇಬೆನ್ನೂರು ರಾ.ಹೆ 766 (ಸಿ) ರಸ್ತೆಯಲ್ಲಿ ಕೊಲ್ಲೂರು ಪೇಟೆ ಪರಿಸರದ 2.8 ಕಿ.ಮೀ ವ್ಯಾಪ್ತಿಯ ಕಾಮಗಾರಿಗೆ ಟೆಂಡರ್ ಆಗಿದೆ ಎಂದರು.

15 ಕೋಟಿ ವೆಚ್ಚದಲ್ಲಿ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣ, 3.48 ಕೋಟಿ ವೆಚ್ಚದಲ್ಲಿ ಹಳ್ಳಿಹೊಳೆ-ಕಬ್ಬಿನಾಲೆ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು ಅತೀ ಶೀಘ್ರದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದರು.

ರೂ. 96 ಕೋಟಿ ವೆಚ್ಚದ ಗಂಗೊಳ್ಳಿ ಕೋಸ್ಟಲ್ ಬರ್ತ್ ಮಂಜೂರಾಗಿದೆ. ಪಿಪಿಪಿ ಮಾದರಿಯಲ್ಲಿ ರೂ 228 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಸೀ ಪ್ಲೇನ್, ಮರೀನಾ ಹಾಗೂ ಬಹುಪಯೋಗಿ ಬಂದರು ಯೋಜನೆ ಟೆಂಡರ್ ಹಂತದಲ್ಲಿದೆ. ರೂ 165 ಕೋಟಿ ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆ ಸರ್ಕಾರದಿಂದ ಮಂಜೂರಾತಿಯಾಗಿದೆ ಎಂದರು.

ರೂ. 73.71 ಕೋಟಿ ವೆಚ್ಚದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ರೂ. 35 ಕೋಟಿ ವೆಚ್ಚದಲ್ಲಿ ಸುಬ್ಬರಾಡಿ ಕಿಂಡಿ ಅಣೆಕಟ್ಟು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೂ 3 ಕೋಟಿ ವೆಚ್ಚದ ಸಿದ್ದಾಪುರ ಪೇಟೆ ಸರ್ಕಲ್ ಕಾಮಗಾರಿ, ರೂ 8 ಕೋಟಿ ವೆಚ್ಚದಲ್ಲಿ ಬೈಂದೂರು ತಾಲೂಕು ಹೊಸ ತಾಲೂಕು ಆಡಳಿತ ಸೌಧ ಕಾಮಗಾರಿ ವೇಗವಾಗಿ ನೆಡೆಯುತ್ತಿದೆ ಎಂದರು.

ತಲ್ಲೂರು, ಹೆಮ್ಮಾಡಿ, ತ್ರಾಸಿ, ಯಡ್ತರೆ, ಬೈಂದೂರು ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಸ್ತಾವನೆ:
ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 20 ಎಕ್ರೆಯಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರ್ ಯೋಜನೆಗೆ ಡಿಪಿ‌ಆರ್ ಕಾರ್ಯ ಮುಗಿದಿದ್ದು ಟೆಂಡರ್‌ಗೆ ಕೇಂದ್ರಕ್ಕೆ ಕಳುಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ತಲ್ಲೂರು, ಹೆಮ್ಮಾಡಿ, ತ್ರಾಸಿ, ಯಡ್ತರೆ ಹಾಗೂ ಬೈಂದೂರು ತಾಲೂಕು ಕಛೇರಿ ಬಳಿ ಒಟ್ಟು ಪ್ರಮುಖ 5 ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು

ಕ್ಷೇತ್ರಾದ್ಯಂತ ಒಟ್ಟು 67 ರುದ್ರಭೂಮಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1.83 ಎಕ್ರೆ ಸ್ಥಳದಲ್ಲಿ ರೂ 3.24 ಕೋಟಿ ವೆಚ್ಚದ ಪಶುವೈದ್ಯಕೀಯ ಪಾಲಿ ಕ್ಲಿನಿಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು. ಬಿ.ಎಸ್.ಎನ್.ಎಲ್ ವತಿಯಿಂದ ಸರ್ವೆ ಕಾರ್ಯ ನೆಡೆಯುತ್ತಿದೆ ಎಂದರು.

ಪ್ರಾಕೃತಿಕ ವಿಕೋಪದಲ್ಲಿ ಪರಿಹಾರ:
ಪ್ರಾಕೃತಿಕ ವಿಕೋಪದಲ್ಲಿ ಒಟ್ಟು ರೂ 41,68,200 ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ. ಸಂಪೂರ್ಣ ಮನೆ ಹಾನಿಯಾದ ಒಟ್ಟು 12 ಫಲಾನುಭವಿಗಳಿಗೆ ತಲಾ ರೂ 95, 100 ರಂತೆ ಒಟ್ಟು ರೂ 11,41,200, ಹಾನಿಯಾದ ಮನೆಗಳ ದುರಸ್ಥಿಗೆ ಒಟ್ಟು 8 ಫಲಾನುಭವಿಗಳಿಗೆ ತಲಾ ರೂ 95,100ರಂತೆ ಒಟ್ಟು ರೂ 7,60,800, ಭಾಗಶಃ ಹಾನಿಯಾದ ಮನೆಗಳಿಗೆ ಒಟ್ಟು 43 ಫಲಾನುಭವಿಗಳಿಗೆ ತಲಾ ರೂ 5,200ರಂತೆ ಒಟ್ಟು ರೂ 2,23,600 ಕಾಲು ಸಂಕದಿಂದ ನೀರುಪಾಲಾದ ಸನ್ನಿಧಿ ಅವರ ಕುಟುಂಬಕ್ಕೆ ರೂ. 5 ಲಕ್ಷ, ಸಂಪೂರ್ಣ ಹಾನಿಯಾದ ದೋಣಿಗೆ ರೂ 9,600,, ಭಾಗಶಃ ಹಾನಿಯಾದ ದೋಣಿಗಳ ಒಟ್ಟು 54 ಫಲಾನುಭವಿಗಳಿಗೆ ತಲಾ 4,100ರಂತೆ ಒಟ್ಟು ರೂ 2,21,400, ಸಂಪೂರ್ಣ ಬಲೆ ಹಾನಿಯಾದ ಒಟ್ಟು 66 ಫಲಾನುಭವಿಗಳಿಗೆ ತಲಾ ರೂ 2,600ರಂತೆ ಒಟ್ಟು ರೂ 1,71,600, ಮೇಘಸ್ಫೋಟದಲ್ಲಿ ಮನೆಗಳಿಗೆ ನೀರು ತುಂಬಿ ದಿನಬಳಕೆ ವಸ್ತುಗಳು ಹಾನಿಯಾದ ಒಟ್ಟು 92 ಫಲಾನುಭವಿಗಳಿಗೆ ತಲಾ ರೂ 10,000 ರಂತೆ ಒಟ್ಟು ರೂ 9,20,000, ಜಾನುವಾರು ಹಾನಿಗೆ ಒಟ್ಟು 14 ಫಲಾನುಭವಿಗಳಿಗೆ ಒಟ್ಟು ರೂ 2,20,000 ಫಲಾನುಭವಿಗಳಿಗೆ ನೀಡಲಾಗಿದೆ. ಪ್ರಾಕೃತಿಕ ವಿಕೋಪದಲ್ಲಿ ಕೃಷಿ ಬೆಳೆ ಹಾನಿಯಾದ 287 ಹೆಕ್ಟರ್ ಪ್ರದೇಶದ 349 ರೈತರ ಪ್ರಕರಣಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಅತೀ ಶೀಘ್ರದಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಆಗುತ್ತಿದ್ದು, ಶೀಘ್ರದಲ್ಲಿ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ರಾಜ್ಯದ ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರುಗಳ ಮೂಲಕ ಮಾಡಿಸಲಾಗುವುದು ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ., ತಾ.ಪಂ.ಮಾಜಿ ಸದಸ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!