spot_img
Monday, April 13, 2026
spot_img

ಚೆಸ್ಟರ್ ಮೃಗಾಲಯದಲ್ಲಿ ಭಾರತೀಯ ನೃತ್ಯ ವೈಭವ

ಇಂಗ್ಲೆಂಡ್: ಉತ್ತರ ಇಂಗ್ಲೆಂಡ್‌ನ ಚೆಸ್ಟರ್ ನಗರ ದೇಶ, ವಿದೇಶಗಳ ಪ್ರವಾಸಿಗಳನ್ನು ಸೆಳೆಯುವುದು ಅಲ್ಲಿರುವ ಜಗತ್ತಿನ ಅತಿ ವಿಶಾಲ ಮತ್ತು ಸರ್ವಾಧಿಕ ಪ್ರ್ರಾಣಿ-ಪಕ್ಷಿ ವೈವಿಧ್ಯಗಳಿರುವ ಪ್ರಾಣಿ ಸಂಗ್ರಹಾಲಯದ ಕಾರಣದಿಂದ. ಯುರೋಪಿನ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಇರುವ ಜುಲೈ ಹಾಗೂ ಆಗಸ್ಟ್ ತಿಂಗಳಿನ ಪ್ರತಿದಿನ ಸರಾಸರಿ ಹದಿನೈದು ಸಾವಿರ ವೀಕ್ಷಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೇ ಜುಲೈ ತಿಂಗಳಿನ ಒಂದು ವಾರಾಂತ್ಯದ ಎರಡು ಸಂಜೆ ಇಲ್ಲಿ ಆಯೋಜನೆಯಾಗಿದ್ದ ‘Into the Night at Chester Zoo’ (ಇನ್ಟು ದ ನೈಟ್ ಅಟ್ ಚೆಸ್ಟರ್ ಜೂ)ಹೆಸರಿನ ಭಾರತೀಯ ನೃತ್ಯ ವೈಭವ ಪ್ರಾಣಿಪ್ರಿಯರಿಗೆ ಅಪೂರ್ವ ಅನುಭವ ನೀಡಿತು.

ಇಂಗ್ಲೆಂಡ್‌ನಲ್ಲಿ ಮೂವತ್ತು ವರ್ಷಗಳಿಂದ ಅನ್ನಪೂರ್ಣ ಇಂಡಿಯನ್ ಡಾನ್ಸ್ಸಂಸ್ಥೆಯ ಮೂಲಕ ಭಾರತೀಯ ನೃತ್ಯಪ್ರಕಾರಗಳ ತರಬೇತಿ ಹಾಗೂ ಅಲ್ಲಿನ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಪ್ರದರ್ಶನ, ಪ್ರಸಾರದಲ್ಲಿ ತೊಡಗಿರುವ ಕುಂದಾಪುರ ಮೂಲದ ಶಾಂತಾ ರಾವ್ ಈ ಪ್ರದರ್ಶನ ಏರ್ಪಡಿಸಿದ್ದರು.

ಇಂಗ್ಲೆಂಡ್‌ನಲ್ಲಿ ನೆಲೆಸಿರುವ ವೃತ್ತಿ ಮತ್ತು ಹವ್ಯಾಸಿ ಕಲಾವಿದರಾದ ಶಾಂತಾ ರಾವ್, ಪ್ರಿಯಾ ಸುಂದರ್ ಭರತನಾಟ್ಯ, ಯೋಗೀಂದ್ರ ಮರವಂತೆ ಯಕ್ಷಗಾನ, ನೋಯೆಲ್ ದತ್ತಾ ಮಣಿಪುರಿ ನೃತ್ಯದ ತುಣುಕುಗಳನ್ನು ಅಂದು ಪ್ರದರ್ಶಿಸಿದರು. ಮೃಗಾಲಯ ಸುತ್ತಿ ದಣಿದಿದ್ದ ಹಿರಿಯ, ಕಿರಿಯ ವಿದೇಶೀಯರಿಗೆ ತಾವು ಈ ವರೆಗೆ ಕಂಡಿರದ ನೃತ್ಯಪ್ರಕಾರಗಳು ಚೇತೋಹಾರಿ ಅನುಭವ ನೀಡಿದುವು. ನೃತ್ಯಗಳ ಹಿನ್ನೆಯಲ್ಲಿ ಅನುರಣಿಸಿದ ಧ್ವನಿಮುದ್ರಿತ ಹಾಡು, ಸಂಗೀತಕ್ಕೂ ಅವರು ಮನಸೋತರು.

ಪ್ರದರ್ಶನದ ಬಳಿಕ ಕಲೆಗಳ ಸ್ಥೂಲ ಪರಿಚಯ ಮಾಡಿಕೊಡಲಾಯಿತು. ಕೆಲವು ಸೂಕ್ಷ್ಮ ಅಂಶಗಳನ್ನು ಮನದಟ್ಟು ಮಾಡಲು ಸವಿವರ ಪ್ರಾತ್ಯಕ್ಷಿಕೆ ನೀಡಲಾಯಿತು. ಕುತೂಹಲಿಗಳ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ನೂರಾರು ಪ್ರೇಕ್ಷಕರು ಮತ್ತು ಅವರ ಮಕ್ಕಳಿಗೆ ಅವರು ಆಗಷ್ಟೇ ನೋಡಿಬಂದ ಪ್ರಾಣಿ ಪಕ್ಷಿಗಳನ್ನು ಭರತನಾಟ್ಯ, ಯಕ್ಷಗಾನ ಮತ್ತು ಮಣಿಪುರಿ ಪ್ರಕಾರಗಳ ಮುದ್ರೆ, ದೇಹಭಂಗಿ, ಅಭಿನಯದ ಮೂಲಕ ಹೇಗೆ ಸಾಂಕೇತಿಸಬಹುದು ಎನ್ನುವುದನ್ನು ಅಭಿನಯಿಸಿ ತೋರಿಸಲಾಯಿತು. ಸೇರಿದ್ದ ಪ್ರೇಕ್ಷಕರು ಕೂಡ ಕೆಲವು ಭಂಗಿಗಳನ್ನು ಅನುಕರಿಸಿ ನಲಿದರು; ಪುಳಕಗೊಂಡರು. ಕೆಲವರು ಕಲಾವಿದರೊಂದಿಗೆ ಫೋಟೊ ತೆಗೆಸಿಕೊಂಡರು. ಭಾರತೀಯ ಪರಂಪರೆಯ ಈ ನೃತ್ಯ ಪ್ರದರ್ಶನ ವಾರಾಂತ್ಯದ ಸಂಜೆಯ ವಿಹಾರಿಗಳಿಗೆ ಸ್ಮರಣೀಯ ಅನುಭವ, ರಂಜನೆ ನೀಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!