spot_img
Monday, March 23, 2026
spot_img

ಕೋಮುವಾದಿ ಮಾನಸಿಕತೆ ಒಂದು ಮನೋಸಾಮಾಜಿಕ ವಿಶ್ಲೇಷಣೆ

ಕೋಮುವಾದಿ ಮಾನಸಿಕತೆ ಹೇಗೆ ಬೆಳೆಯುತ್ತದೆ? ಈ ಬಗ್ಗೆ ಹಲವು ವೈಜ್ಞಾನಿಕ ಹಾಗು ಸಮಾಜವಿಜ್ಞಾನ ತಜ್ಞರ ಚಿಂತನೆಗಳು ಲಭ್ಯ.

ಕೋಮುವಾದ ಅಂದರೆ ಒಬ್ಬರ ಸ್ವಂತ ಸಮುದಾಯಕ್ಕೆ ಹೊಂದಿರುವ ಬಲವಾದ ಬಾಂಧವ್ಯ. ಇದು ಒಬ್ಬರ ಸ್ವಂತ ಧರ್ಮದ ಬಗ್ಗೆ ಅನಾರೋಗ್ಯಕರ ಬಾಂಧವ್ಯ .ಒಂದು ನಿರ್ದಿಷ್ಟ ಧರ್ಮದ ಅನುಯಾಯಿಗಳು ತಮ್ಮದೇ ಆದ ಧಾರ್ಮಿಕ ಸಮುದಾಯಕ್ಕೆ ರಾಜಕೀಯ ನಿಷ್ಠೆಯನ್ನು ಹೊಂದಬೇಕೆಂದು ಪ್ರತಿಪಾದಿಸುತ್ತದೇ.ಕೋಮುವಾದವು ಒಂದು ನಿರ್ದಿಷ್ಟ ಧರ್ಮದ ಅನುಯಾಯಿಗಳಿಗೆ ಇತರ ಧಾರ್ಮಿಕ ಸಮುದಾಯಗಳ ಅನುಯಾಯಿಗಳ ವಿರುದ್ಧ ದ್ವೇಷವನ್ನು ಹೊಂದುವಂತೆ ಬೋಧಿಸುತ್ತದೆ. ನಿರ್ದಿಷ್ಟ ಧರ್ಮದ ಅನುಯಾಯಿಗಳು ಇತರ ಧರ್ಮಗಳಿಗಿಂತ ಭಿನ್ನವಾದ ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿರುತ್ತಾರೆ ಎಂದು ಅದು ಬೋಧಿಸುತ್ತದೆ. ಮೂಲಭೂತವಾಗಿ, ಕೋಮುವಾದವು ಜಾತ್ಯತೀತತೆ ಮತ್ತು ಮಾನವತಾವಾದವನ್ನು ವಿರೋಧಿಸುತ್ತದೆ.

ಕೋಮುವಾದ ಅನ್ಯ ಕೋಮಿನವರು ಬಗ್ಗೇ ದ್ವೇಷವನ್ನು ಹರಡುವಾಗ ಅದರಿಂದ ಉಂಟಾಗುತ್ತಿರುವ ಕೋಮುಗಲಭೆಗಳು ದೇಶದ ಜನಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಸಾಮಾನ್ಯ ಜನರನ್ನು ಭಯ ಭೀತರನ್ನಾಗಿ ಮಾಡಿದೆ.

ದ್ವೇಷ ಬೆಳೆಯಲು ಒಬ್ಬ ವ್ಯಕ್ತಿಯ ಸ್ವ ಅನುಭವ ಗಳಿಂದ ವ್ಯಕ್ತಿಯ ವ್ಯಕ್ತಿತ್ವ ದ ಮೇಲೆ ಉಂಟಾಗುವ ಪ್ರಭಾವ, ವ್ಯಕ್ತಿಯ ಜೊತೆ ಇರುವವರು ತಲೆಗೆ ತುಂಬಿಸಿದಂತಹ ನಂಬಿಕೆಗಳು ಉದಾಹರಣೆಗೆ ಮುಸ್ಲಿಂ ಕೋಮುವಾದಿ ಗಳಿಗೆ ಹಿಂದೂ ತನ್ನ ಹುಟ್ಟಿನಿಂದಲೇ “ಕಾಫರ್” ಹಾಗೆಯೆ ಹಿಂದೂ ಕೋಮುವಾದಿಗಳು ಮುಸ್ಲಿಂ ತನ್ನ ಹುಟ್ಟಿನಿಂದಲೇ ಅಪರಾಧಿ ಎಂದು ತೀರ್ಮಾನಿಸಿ ಬಿಡುತ್ತಾರೆ. ಡುಪ್ಲೆ ಥಿಯೋರಿ ಪ್ರಕಾರ ದ್ವೇಷ ಉಂಟಾಗಲು ಮೂರು ಮುಖ್ಯ ಅಂಶಗಳು ಇವೆ.

ಮೊದಲನೆಯದು ಅನೋನ್ಯತೆಯ ನಿರಾಕರಣೆ ಅಂದರೇ ಒಂದು ನಿರ್ದಿಷ್ಟ ಕೋಮಿಗೆ ಸೇರಿದ ವ್ಯಕ್ತಿಯ ಬಗ್ಗೆ ಒಂದು ರೀತಿಯ ವಿಕರ್ಷಣೆ ಮತ್ತು ಅಸಹ್ಯ ಮನಸ್ಸಿಗೆ ಬಂದು ಬಿಡುತ್ತದೆ. ಹೀಗೇ ಬರಲು ಕಾರಣ ಆ ಕೋಮಿನ ವ್ಯಕ್ತಿಗಳ ಕೆಲವು ಕೆಲಸಗಳು  ಮತ್ತು ಆ ಕೆಲಸಗಳು ಅವರಿಂದಲೇ ನಡೆಯಿತು ಎಂಬ ಪ್ರಚರಾಗಳಿಂದ ಉದ್ಭವಿಸಬಹುದು. ಯಾವುದೋ ಒಂದು ಕೆಟ್ಟ ಕಾರ್ಯ ಆ ಕೋಮಿನ ವ್ಯಕ್ತಿ ಆತನನ್ನು ದ್ವೇಷಿಸುವ ವ್ಯಕ್ತಿಯ ಕೋಮಿನ  ಸಂಬಂಧಿಕರು, ಸ್ನೇಹಿತರ ಮೇಲೆ ಮಾಡಿರಬಹುದು .ಆ ಕಾರಣದಿಂದಲೇ ಈ ದ್ವೇಷ ಭಾವನೆ ಆ ಅನ್ಯ ಕೋಮಿನ ವ್ಯಕ್ತಿ ಗಳೆಲ್ಲರ ಮೇಲೆ ಬರುತ್ತದೆ.

ವ್ಯಕ್ತಿ  ಅಥವಾ ಗುಂಪು ಒಂದು ಮಾಡಿದ ತಪ್ಪಿಗೆ ಅವನೇ ಅಥವಾ ಆ ಗುಂಪೇ ಹೊಣೆ  ಎಂಬುದು ನಾಗರಿಕ ಸಮಾಜದ ಒಂದು ಕಟ್ಟಳೆ.ಆದರೆ ಕೋಮುವಾದ ನಾಗರಿಕ ಸಮಾಜದ ಈ ಕಟ್ಟಳೆ ತಿರಸ್ಕರಿಸಿ ಹಿಡಿ ಕೋಮು ತಪಿತಸ್ಥ ಎಂದು ದ್ವೇಷಿಸುತ್ತದೇ. ಸ್ವಾತಂತ್ರ್ಯ ನಂತರದ ಲಕ್ಷಾಂತರ ಮತೀಯ ಕೊಲೆಗಳು, ಗಾಂಧಿ ಹತ್ಯೆ ನಂತರ ಚಿತ್ಪಾವನ ಬ್ರಾಹ್ಮಣರ ಹತ್ಯೆ, ಇಂದಿರಾ ಹತ್ಯೆ ನಂತರ ಸಿಖ್ಖರ ನರಮೇಧ ಇವೆಲ್ಲ ನಡೆದದ್ದೇ ಹೀಗೇ.

ಎರಡನೆಯ ಅಂಶ ಎಂದರೆ ಒಂದು ಮತದವರ ಬಗ್ಗೆ ಬಹಳ ಉತ್ಸಾಹದಿಂದ ಸುದ್ದಿ ಹರಡಿ ಇನ್ನಷ್ಟು ಜನರೂ ಈ ದ್ವೇಷ ಭಾವನೆ ಬೆಳೆಸಿಕೊಳ್ಳುವಂತೆ ಮಾಡುವುದು.ಆ ಕೋಮಿನವರು ನಮಗಿಂತ ಬಲಿಷ್ಟರಾಗುತ್ತರೆ , ನಮ್ಮನ್ನೂ ಮುಗಿಸಿಬಿಡುತ್ತಾರೆ, ಅವರೆಲ್ಲ ಕೆಟ್ಟವರು ಹೀಗೆಲ್ಲ ಒಂದು ಬಗೆಯ ಸಿಟ್ಟು ಹಾಗೂ ಅಸುರಕ್ಷತೆ ಹರಡಲಾಗುತ್ತದೆ.

ಮೂರನೇ ಅಂಶ ಒಂದು ರೀತಿಯ ಬದ್ಧತೆಯಿಂದ ಅನ್ಯ ಕೋಮು ಹಾಗು ಅದರ ಸದಸ್ಯರು ಗಳ ಬಗ್ಗೆ ತಿರಸ್ಕಾರ ಮತ್ತು ಅವರ ಅಪಮೌಲಿಕರಣ ಮಾಡಲು ಶೈಕ್ಷಣಿಕ ಕಾರ್ಯಕ್ರಮ ಶಾಲೆಯಲ್ಲೇ ಅಥವಾ ಪಟ್ರೆ ಪಠ್ಯೇತರ ಚಟುವಟಿಕೆಗಳಲ್ಲಿ ಸೇರಿಸಿ ಸಣ್ಣ ಮಕ್ಕಳ ಬ್ರೈನ್ ವಾಶ್ ಮಾಡುವುದು.ಈ ಮೂರು ಅಂಶಗಳ” ದ್ವೇಷದ ತ್ರಿಕೋನ “ಕೋಮುವಾದ ಬೆಳೆಸುವಲ್ಲಿ ಯಶಸ್ವಿಯಾಗಿದೆ.

ದ್ವೇಷ ಹರಡುವವರ ಬಗ್ಗೆ ನಡೆದ ಸಂಶೋಧನೆಗಳ ಪ್ರಕಾರ ಅವರು ಜೀವನದಲ್ಲಿ ತಾವು ಯೋಚಿಸಿದಷ್ಟು ಸಾಧನೆ ಮಾಡಲು ಆಗದವರು ಆಗಿದ್ದು ಅವರಲ್ಲಿ ಆಳವಾಗಿ ಬೇರೂರಿದ ಕೀಳರಿಮೆ, ಹತಾಶೆ ಹಾಗೂ ಕುಗ್ಗುತ್ತಿರುವ ಸ್ವಾಭಿಮಾನ ಇವುಗಳ ಕಾರಣ ಏನನ್ನಾದರೂ ದೂಷಿಸಬೇಕು,ಹಾಗೂ ಯಾವುದಾದರೂ ಒಂದು ಗುಂಪು ಅಥವಾ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡು “ಸಾಧಕ” ಸ್ಥಾನಕ್ಕೆ ಏರುವ ಪ್ರಯತ್ನ ಮಾಡ ಬೇಕು ಎಂಬ ಮನೋಸ್ಥಿತಿ ಇರುತ್ತದೆ

 ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿದಾಗ ಅಥವಾ ಜೀವನದಲ್ಲಿ ಪ್ರತಿಕೂಲತೆ ಒದಗಿ ಬಂದಾಗ ಕೆಲವರಲ್ಲಿ ದ್ವೇಷ, ಅಸೂಯೆ ಪ್ರಚೋದನೆ ಗೊಂಡು ತೀವ್ರ ದ್ವೇಷ ಬೆಳೆಯಬಹುದು.

ದ್ವೇಷ ಎಂಬ ಪ್ರಕ್ರಿಯೆಯಲ್ಲಿ ವ್ಯಕ್ತಿಯ ನೈತಿಕ ಪ್ರಜ್ಞೆ ಕಡಿಮೆಯಾಗುತ್ತದೆ ಅಥವಾ ಇಲ್ಲವೇ ಆಗುತ್ತದೆ. ಮತಾಂಧತೆಯ ಈ ಘಟ್ಟದಲ್ಲಿ ಯಾರೋ ಹೇಳುವ ಮಾತುಗಳ ಕುರುಡು ಅನುಸರಣೆ, ವಿಮರ್ಶೆ ಮಾಡುವ ಶಕ್ತಿ

ಕಳೆದುಕೊಂಡು ಅನ್ಯ ಕೋಮಿನವರು ಕೂಡ ಮನುಷ್ಯರೇ,ಅವರ ದುಃಖದ ಅರಿವು ಹಾಗೂ ಸಹಾನುಭೂತಿ ಹೋಗಿಬಿಡುತ್ತದೆ. ಆ ಕಾರಣದಿಂದ ಅನ್ಯ ಕೋಮಿನವರ ಹತ್ಯೆಗು ಕೂಡ ಪ್ರಚೋದಿತರಾಗುತ್ತರೆ. ಹೆಚ್ಚಿನ ಈ ದ್ವೇಶಿಗಳು ಈ ದ್ವೇಷ ಕೃತ್ಯಗಳನ್ನು ಒಂದು ಗುಂಪಿನ ಸಹಾಯದಿಂದಲೇ ಮಾಡುತ್ತಾರೆ. ಈ ಗುಂಪು ಒಂದು ರೀತಿಯ ಅನಾಮಧೇಯತೆ ಕೊಡುತ್ತದೆ ಮತ್ತು ಒಂದು ರೀತಿಯ ರಕ್ಷಣೆ ಕೊಡುತ್ತದೆ ,ಕೆಲವೊಮ್ಮೆ ಮಾನ್ಯತೆ ಕೂಡ ಕೊಡುತ್ತದೆ .ಕೆಲವರು ಕೇವಲ ಮನಸ್ಸಿನ thrill ಗಾಗಿ ಕೆಲವೊಮ್ಮೆ ತಮ್ಮ ನೆರೆಹೊರೆ ಯಾ ಧರ್ಮ ಯಾ ದೇಶ ರಕ್ಷಣೆಗೆ ಎಂದು ದ್ವೇಷಿಸುವವರ ಕೊಲೆ ಮಾಡುತ್ತಾರೆ. ಕೆಲವೊಮ್ಮೆ ಈ ದ್ವೇಷಿತ ಕೋಮಿನ ಇತರ ವ್ಯಕ್ತಿಗಳು ಮಾಡಿರುವ ಅಪರಾಧ ಒಂದರ ವಿರುದ್ಧ ಪ್ರತೀಕಾರ ಮಾಡಲು ಪಣ ತೊಟ್ಟು ಅದೇ ತಮ್ಮ ಜೀವನದ ಉದ್ದೇಶ ಎಂದು ಕೊಲೆ ಮಾಡುವವರು ಇದ್ದಾರೆ . ಆಧುನಿಕ ಯುಗದಲ್ಲಿ ಸಾರು ಸಗಟಾಗಿ WhatsApp ನಲ್ಲಿ ಸುಳ್ಳು ಸಂದೇಶಗಳನ್ನು ,ಹಿಂದೆ ಒಂದು ಸಮುದಾಯ ಮಾಡಿದ ತಪ್ಪುಗಳಿಗೆ ಪ್ರತೀಕಾರ ಭಾವನೆ, ಸಂತ್ರಸ್ತ ಸಮುದಾಯದ ಗೌರವದ ಪ್ರಶ್ನೆ, ದ್ವೇಷ ಬಿತ್ತರಿಸವುದು, ಸೇಡು ತೀರಿಸಿಕೊಳ್ಳಲು ಪ್ರೇರೇಪಿಸುವುದು ಇವೆಲ್ಲಾ ದ್ವೇಷ ಮತಾಂಧತೆ ಹೆಚ್ಚಿಸುತ್ತಾ ಇದೆ.

ಭಾರತದಂತಹ ದೇಶದಲ್ಲಿ ವಿವಿಧತೆ ಇರುವ ಸಮಾಜದಲ್ಲಿ ವಿವಾದ ಘರ್ಷಣೆ ಸರ್ವೇ ಸಾಮಾನ್ಯ .ಇವುಗಳನ್ನು ಶಾಂತಿಯುತವಾಗಿ ಮತ್ತು ಪ್ರಜಾಸತ್ಮಕವಾಗಿ ಪರಿಹರಿಸುವ ಕಾರ್ಯವಿಧಾನ ಸಮಾಜದಲ್ಲಿ ಬೆಳೆಯಬೇಕು.ಪ್ರತಿ ವೈವಿಧ್ಯಮವಾಗಿರುವ ಗುಂಪಿನ ಜನರ ಕುಂದುಕೊರತೆ ಚರ್ಚೆ ಮಾಡಿ  ಪ್ರಜಪ್ರಭುತ್ವ ಪ್ರಕ್ರಿಯೆ ಮೂಲಕ ಪರಿಹರಿಸಲು ಪ್ರಯತ್ನ ಮಾದ ಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಹಬ್ಬಗಳಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಎಲ್ಲಾ ಧರ್ಮೀಯರು ಸೇರಿ ಆಚರಿಸುವುದು ಮಾಡುವಾಗ ಇತರರ ಸಂಸ್ಕೃತಿ ಆರ್ಥ ಮಾಡಿಕೊಳ್ಳಲು ಮತ್ತು ಅನ್ಯಾಧರ್ಮಿಯ ಸಂಸ್ಕೃತಿ ಬಗ್ಗೆ ಗೌರವ ಬೆಳೆಸಲು ಹಾಗೂ ಸಹಿಷ್ಣತೆ ಬೆಳೆಯಲು ಸಹಕಾರಿ. ಹಾಗೆಯೆ ಮತಾಂಧತೆಯ ವಿರುದ್ಧ ಶಿಕ್ಷಣ ಬಹಳ ಸಹಕಾರಿ.ಶಾಲೆ ಕಾಲೇಜುಗಳಲ್ಲಿ ದಯೆ,ಅನುಭೂತಿ,ಸಹಾನುಭೂತಿ, ಸಾಂಘಿಕತೆ, ವೈವಿದ್ಯತೆ ಎಲ್ಲವ ಸೇರಿಸಿದರೆ ಉದಾರ ಶಿಕ್ಷಣ ನೀಡಿದರೆ ಮುಂದಿನ ಪೀಳಿಗೆ ಉದ್ದರವಾಗ ಬಹುದು.

ಇಂದೂ ದ್ವೇಷದ ಕಾರ್ಖಾನೆ ಗಳಾದ ಸಾಮಾಜಿಕ ಮಾಧ್ಯಮಗಳ ಬಳಕೆ, ವಿಮರ್ಶಾತ್ಮಕ ಆಲೋಚನೆಗಳ ಅಗತ್ಯತೆ ಈ ಬಗ್ಗೆ ಕೂಡ ಶಾಲಾ ಕಾಲೇಜುಗಳಲ್ಲಿ ಮಾತನಾಡುವ ಅಗತ್ಯತೆ ಇದೆ.ಕೋಮು ದ್ವೇಷ ಭಾಷಣ ಹಿಂಸಾಚಾರ ಇದರ ಗಂಭೀರ ಪರಿಣಾಮಗಳ ಬಗ್ಗೆಯೂ ರೇಡಿಯೋ ಟಿವಿ ಮುಂತಾದ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಅಗತ್ಯತೆ ಇದೆ.

ನಾವು ಪ್ರತಿಯೊಬ್ಬರೂ ನಮ್ಮ ಸ್ವಂತ ಧಾರ್ಮಿಕ ನಂಬಿಕೆಗಳು / ಸಮುದಾಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ನಡುವೆ ಸಮತೋಲನವನ್ನು ತಂದುಕೊಳ್ಳಬೇಕು.

 ಯಾವುದೇ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಅಗತ್ಯವಿದೆ.

  ಏಕತೆ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಿಸಲು ಎಲ್ಲ ಸಮುದಾಯಗಳ ಮುಖಂಡರು ಮುಂದಾಗಬೇಕು.

  ನಿರುದ್ಯೋಗ, ಅನಕ್ಷರತೆ ಮತ್ತು ಬಡತನದ ಸಾಮಾಜಿಕ-ಆರ್ಥಿಕ ಸಮಸ್ಯೆಯ ನಿರ್ಮೂಲನೆಗೆ ಯಾವುದೇ ತಾರತಮ್ಯ ಮಾಡದೆ ಕೆಲಸ ಮಾಡಬೇಕಾಗಿದೆ.

  ನಾವು ಹಿಂದೆ ಧಾರ್ಮಿಕ ಬಹುತ್ವ ಮತ್ತು ಶಾಂತಿಯುತ ಸಹಬಾಳ್ವೆಯ ಸುದೀರ್ಘ ಸಂಪ್ರದಾಯವನ್ನು ಹೊಂದಿದ್ದೇವೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು.  ಭಕ್ತಿ ಮತ್ತು ಸೂಫಿ ಚಳುವಳಿಗಳ ಭಕ್ತಿಗೀತೆಗಳು ಮತ್ತು ಕಾವ್ಯಗಳಲ್ಲಿ ಇದು ಪ್ರಮುಖವಾಗಿದೆ.

  ಸಹವರ್ತಿ ನಾಗರಿಕರ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಅಸಹಿಷ್ಣು ನಾಗರಿಕರಿಗೆ ‘ಭಾರತೀಯರು’ ಆಗುವ ಹಕ್ಕಿಲ್ಲ, ಏಕೆಂದರೆ ಇದು ಭಾರತದ ಮೂಲ ಮೌಲ್ಯಗಳು ಮತ್ತು ನೀತಿಗಳಿಗೆ ವಿರುದ್ಧವಾಗಿದೆ, ಕೋರ್ ಭಾರತೀಯ ಮೌಲ್ಯಗಳು ಮತ್ತು ನೀತಿಗಳು ಅಸಹಿಷ್ಣುತೆಗೆ ಸ್ಥಳವಿಲ್ಲ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!