Sunday, September 8, 2024

ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯದ ವಾರ್ಷಿಕ ಅಧಿವೇಶನ

ಕುಂದಾಪುರ: ಬ್ರಾಹ್ಮಣ ಸಮಾಜದಲ್ಲಿ ಒಗ್ಗಟ್ಟಿನ ಅಗತ್ಯತೆ ಇದ್ದು ಎಲ್ಲರನ್ನು ಸಹ ಗೌರವಿಸುವಂತಾಗಬೇಕು ಸಂಘಟನೆಯಿಂದ ಸಮಾಜಕ್ಕೆ ಒಳ್ಳೆದಾದಾಗ ಮಾತ್ರ ಸಂಘಟನೆ ಯಶಸ್ವಿಯಾಗಲು ಸಾಧ್ಯವೆಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರೂರು ಪ್ರಧಾನ ಅರ್ಚಕ ವೇದಮೂರ್ತಿ ಅನಂತಯ್ಯ ಬಾಯರಿ ಹೇಳಿದರು.
ಅವರು ಮಡಾಮಕ್ಕಿ ಶ್ರೀ ವೀರಭದ್ರ ದೇವಸ್ಥಾನದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯದ ವಾರ್ಷಿಕ ಅಧಿವೇಶನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೋಟ್ ಪುಸ್ತಕ ವಿತರಣೆ, ಕಲಿಕಾ ಪ್ರೋತ್ಸಾಹ, ಸನ್ಮಾನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜ್ಯೋತಿಷ್ಯ ವಿದ್ವಾನ್ ರಮೇಶ್ ಭಟ್ ಹೆಗ್ಗುಂಜೆ ಇವರು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಬಿ. ಎಸ್ ಅನಂತಪದ್ಮನಾಭ ಬಾಯರಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ಇವರುಗಳು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು, ಕೃಷ್ಣಮೂರ್ತಿ ಮಂಜರು ಪ್ರಧಾನ ಅರ್ಚಕರು ಶ್ರೀ ವೀರಭದ್ರ ದೇವಸ್ಥಾನ ಮಡಾಮಕ್ಕಿ ಇವರುಗಳನ್ನು ಗೌರವಿಸಲಾಯಿತು. ಅಲ್ಲದೆ ಕಾರ್ಯಕ್ರಮದ ಪ್ರಾಯೋಜಕರಾದ ವೇ. ಮೂ ಅನಂತಯ್ಯ ಬಾಯರಿ ಇವರನ್ನು ಗೌರವಿಸಲಾಯಿತು.

ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯದ ಅಧ್ಯಕ್ಷರಾದ ಎಮ್. ಸತ್ಯನಾರಾಯಣ ಹೆಬ್ಬಾರ್ ಮಾತನಾಡಿ ಪ್ರತಿಯೊಬ್ಬರ ಸಹಕಾರ ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮಗಳು ನಡೆಸಲು ಸಾಧ್ಯ ಎಂಬುದಾಗಿ ತಿಳಿಸಿದರು. ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಪೂರ್ವಾಧ್ಯಕ್ಷರಾದ ಅನಂತ ತಂತ್ರಿ ಮಡಾಮಕ್ಕಿ ಹಾಗೂ ಗೌರವಾಧ್ಯಕ್ಷರಾದ ರಾಧಕೃಷ್ಣ ಮಯ್ಯ, ಮಹಿಳಾ ಅಧ್ಯಕ್ಷೆ ಭಾವನಾ ಎಮ್. ಭಟ್ ಉಪಸ್ಥಿತರಿದ್ದರು. ಬೆಳ್ವೆ ವಲಯದ ಯುವ ವೇದಿಕೆ ಅಧ್ಯಕ್ಷ ರಾಜೇಂದ್ರ ಅಲ್ಸೆ ಮೊದಲಾದವರು ಉಪಸ್ಥಿತರಿದ್ದರು. ಬೇರೆ ವಲಯಗಳಿಂದ ಅಧ್ಯಕ್ಷರು ಸದಸ್ಯರನ್ನು ಗೌರವಿಸಲಾಯಿತು, ರೋಹಿತ್ ಕಾರಂತ ಸೂಗ್ಗೋಳಿ, ರಮ್ಯಶ್ರೀ ಹೆಬ್ಬಾರ್ ಮರೂರು ಅವರಿಗೆ ಪ್ರತಿಭಾ ಪುರಸ್ಕಾರ, ಉಲ್ಲಾಸ್ ಕಲ್ಕೂರ ಬೆಳ್ವೆ, ದೀಪಿಕಾ ಉಡುಪ ಸಂಸೆ ಅವರಿಗೆ ಕಲಿಕಾ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಹೆಚ್. ಕೆ ಪ್ರಸನ್ನ ಭಟ್ ಮರೂರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು, ಡಾಕ್ಟರೇಟ್ ಪಡೆದ ಜ್ಯೋತಿಷ್ಯ ವಿದ್ವಾನ್ ಅಭಿಷೇಕ್ ಬಾಯರಿ ಇವರನ್ನು ಸನ್ಮಾನಿಸಲಾಯಿತು. ಅಲ್ಲದೇ ಎ. ಗೋಪಾಲಕೃಷ್ಣ ಹೆಬ್ಬಾರ್ ಅಬ್ಲಿಕಟ್ಟೆ ಮತ್ತು ಶ್ರೀಮತಿ ಕೆ. ಲಲಿತಾ ಭಟ್ ಮರೂರು ಗೌರವಿಸಲಾಯಿತು, ಶ್ರೀನಿವಾಸ ಬಾಯರಿ ಬೆಪ್ಡೆ ಸ್ವಾಗತಿಸಿದರು, ರವಿರಾಜ ಮಂಜ ಮಾಂಡಿ ವರದಿ ಸಲ್ಲಿಸಿದರು, ಗಣೇಶ್ ಹೇರಳೆ ಲೆಕ್ಕಪತ್ರ ಮಂಡಿಸಿದರು, ಚಂದ್ರಶೇಖರ ಮಂಜ ಮಾಂಡಿ, ವಾಸುದೇವ ನಕ್ಷತ್ರ, ಮಹಾಭಲೇಶ್ವರ ಕಲ್ಕೂರ, ವಾಸುದೇವ ಬಾಯರಿ ಹಾಗೂ ರಾಮಚಂದ್ರ ಉಡುಪ ಕೆರೆಬೈಲ್ ಸಹಕರಿಸಿದರು. ರಾಜೇಂದ್ರ ಐತಾಳ್ ಮತ್ತು ಸಂಗಡಿಗರು ವೇದ ಘೋಷ ಮಾಡಿದರು ಮನಸ್ವಿ, ದೀಪಿಕಾ ಪ್ರಾರ್ಥಿಸಿದರು, ಶ್ರೀನಿವಾಸ ಬಾಯರಿ ಮರೂರು ವಂದಿಸಿದರು. ವೈ. ನಾಗೇಶ ಭಟ್ ಹಾಗೂ ಗಣೇಶ್ ಹೇರಳೆ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!