spot_img
Monday, March 23, 2026
spot_img

ಕಾರಂತಜ್ಜನ ಪ್ರಭಾವಲಯದಲ್ಲರಳಿದ ‘ಸುಗಂಧಿ’

ಅಂತರಾಷ್ಟೀಯ ಪ್ರಶಸ್ತಿ ವಿಜೇತ ದಿ. ಗುರುಮೂರ್ತಿಯವರು ಆಕ್ಷನ್, ಕಟ್ ಹೇಳಿದ ಡಾ. ಶಿವರಾಮಕಾರಂತರು ‘ಅಳಿದ ಮೇಲೆ'(ಲು)ಮತ್ತೆ ನೆನಪು ಮಾಡಿಸಿದ ನರೇಂದ್ರ ಕುಮಾರ್ ಕೋಟ ಅವರು ಸುಗಂಧಿ ಎಂಬ ಕಲಾಪುಷ್ಪವೊಂದನ್ನು ನೆರಳು-ಬೆಳಕಿನೊಂದಿಗೆ ಕ್ಯಾನ್ವಾಸ್ ಮೇಲೆ ಒಂದು ಕಲಾತ್ಮಕವಾದ ಚಿತ್ರವನ್ನು ಅರಳಿಸಲು ಸಹಕಾರ ನೀಡಿದ ಶಾಲಾಮಾಸ್ಟರ್. ಅಂದ ಹಾಗೇ ಈ ಕಥಾ ಚಿತ್ರವು ಟೈಟಲ್ ಹೆಸರಿನಿಂದ ಕೇಂದ್ರಬಿಂದುವಾದರೆ, ಅದರ ಜೊತೆಯಲ್ಲಿ ಇನ್ನೇರಡು ಪಾತ್ರಗಳು ಚಿತ್ರವನ್ನು ಸುತ್ತುತ್ತದೆ.

ವಾಸ್ತವದಲ್ಲಿ ಈ ಸುಗಂಧಿ ರಾತ್ರಿ ವೇಳೆ ಅರಳಿ ಸುವಾಸನೆ ಬೀರಿದರೆ, ಚಲನಚಿತ್ರದಲ್ಲಿ 2:10 ನಿಮಿಷ ಕತ್ತಲೆ ಪರದೆಯ ಮೇಲೆ ತನ್ನ ಕಥಾ ಪರಿಮಳವನ್ನು ಸೃಜನಶೀಲ ಕಲಾವಿದರ ಅಭಿನಯದ ಮೂಲಕ ಪಸರಿಸುತ್ತದೆ. ಸಮಾಜದಲ್ಲಿ ನಿಂದನೆ ಒಳಗಾಗುವ ಬಡ ಕುಟುಂಬದ ಶಾಲಾ ಬಾಲಕಿಯೊಬ್ಬಳ ಗುರಿ ಸಾಧಿಸುವ ಛಲದೊಂದಿಗೆ ಕತ್ತಲೆ ಬದುಕಿನಲ್ಲಿ ನೋವುಗಳ ಅನುಭವಗಳು, ಮೇಲು ನೋಟಕ್ಕೆ ದಾಖಲಿಸುವ ಕಥೆಯಂತೆ ಕಂಡುಬರುವ ಈ ಚಿತ್ರದಲ್ಲಿ ಕಾರಂತರ ಭಾವಚಿತ್ರದ ಸ್ಫೂರ್ತಿಯಿಂದ ಪ್ರಜ್ಞಾ ಪೂರ್ವಕವಾಗಿ ಕಾರಂತಜ್ಜರಿಂದ ಪ್ರಭಾವಿತರಾಗಿ ಗುರುವಿನ ಬಲದಿಂದ ತಾನು ಸಾಧಿಸುವ ಗುರಿಯನ್ನೆ ತಲುಪಿ ಉತ್ತಮ ಸಮಾಜಕ್ಕೆ ಒಂದು ಮಾದರಿಯಾಗಿ, ಕಾರಂತಜ್ಜನ ಥೀಮ್ ಪಾರ್ಕ್‌ನ ವೇದಿಕೆಯ ಮೇಲೆ ಗಣ್ಯರಿಂದ ಸನ್ಮಾನ ಪಡೆಯುವುದರ ಮೂಲಕ ಚಿತ್ರ ಮಂಗಳಂ ಕಾಣುತ್ತದೆ.

ಇಡೀ ಚಿತ್ರದ ಹೈಲೈಟ್ಸ್ ಯೆಂದರೆ ಅದುವೇ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರು ಬಿಂಬಿಸುವ ವಿಶಿಷ್ಟ ಪಾತ್ರಾಭಿನಯ. ಅಂದರೆ, ಅವರು ಪಾತ್ರದೋಳಗೆ ಲೀನವಾಗುತ್ತಿದ್ದ ಪರಿ. ಕಡಲತ್ತ ದಿಟ್ಟಿಸುತ್ತ ಪತಿಯ ಬರುವಿಕೆಯ ನಿರೀಕ್ಷೆಯಲ್ಲಿ ಜಾತಕ ಪಕ್ಷಿಯಂತೆ (ಅಂದಿನ ಬೋಟ್ ದುರಂತದಲ್ಲಿ ನಾಪತ್ತೆಯಾದವರರೋಬ್ಬರ ಕಥೆಯ ಎಳೆಯನ್ನು ಸೇರಿಸಲಾಗಿದೆ) ಕಾಯುವ ಸುಗಂಧಿಯ ತಾಯಿಯಾಗಿ ನಮ್ಮ ನಡುವಿನ ಅಪರೂಪದ ಕಲಾವಿದೆ ವಿನಯಾ ಪ್ರಸಾದನವರು ತಮಗೆ ನೀಡಿದ ಪಾತ್ರದಲ್ಲಿ ಅಭಿನಯ ಅಭಿವ್ಯಕ್ತಿಸುವ (ಪ್ರಕಟಿಸುವ) ಪರಿ ಅದ್ಭುತ.ಹಾಗೇ ತಮ್ಮ ಹಾಸ್ಯಪಾತ್ರಗಳಿಂದ ಚಿತ್ರ (ನಾಟಕ) ಪ್ರೇಮಿಗಳಿಂದ ಪ್ರಶಂಸೆಗೆ ಒಳಗಾದ ರಘುಪಾಂಡೇಶ್ವರ ಈ ಚಿತ್ರದಲ್ಲಿ ತಮ್ಮ ಎಂದಿನಂತೆ ಅಂಗಡಿ ಮಾಲೀಕನಾಗಿ ನಗೆಯುಕ್ಕಿಸುವುದರ ಜೊತೆಯಲ್ಲಿ ಕೆಲವು ಪಾತ್ರಕ್ಕೆ ದ್ವನಿಯಾಗಿದ್ದಾರೆ. ಬೇರೆ ಸಿನಿಮಾಗಿಂತ ಇದು ಕೊಂಚ ಭಿನ್ನವಾಗಿ ನಿಲ್ಲುವ ಈ ಸಿನಿಮಾದಲ್ಲಿ ಕಥೆಯಿಂದಾಚೆ ಅನಗತ್ಯವಾದ ಯಾವುದೇ ಎಲಿಮೆಂಟ್ ತುರುಕಿಲ್ಲವಾದರು, ಕೆಲವು ಸನ್ನಿವೇಶಗಳು ಮನಸಲ್ಲಿ ಉಳಿಯುವಂತೆ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರ ಹೆಗ್ಗಳಿಕೆಯಾದರು ಚಿತ್ರದ ಬಿಡುಗಡೆಯನ್ನು ನೋಡಲು ಜಿ. ಮೂರ್ತಿ ಈ ಲೋಕದಲ್ಲಿಲ್ಲ ಅನ್ನುವ ದುಃಖ ಸಿನಿಮಾ ತಂಡಕ್ಕಿದೆ. ಬಹುತೇಕ ವೇದಿಕೆ ಕಾರ್ಯಕ್ರಮಗಳಲ್ಲಿ ಸುಂದರವಾಗಿ ನಿರೂಪಣೆಗೈದು ಜನರ ಮೆಚ್ಚುಗೆ ಗಳಿಸಿದ ಕಾರ್ಕಳ ಶಾಲೆಯ ಶಿಕ್ಷಕರಾದ ಸತೀಶ್ ವಡ್ಡರ್ಸೆಯವರ ಸಂಭಾಷಣೆ ಕೇಳುವುದು ಚೆಂದ. ಹಾಗೆ ಕರಾವಳಿ ಮಡಿಲಿನ ನಿಸರ್ಗ ಸಿರಿಯನ್ನು ಮನಮೋಹಕವಾಗಿ ತಮ್ಮ ಕ್ಯಾಮರ ಕಣ್ಣಲ್ಲಿ ಸೆರೆಹಿಡಿದಿರುವ ಪಿ.ಕೆ ದಾಸ್‌ನವರ ಛಾಯಾಗ್ರಹಣವಿದೆ. ಮೊದಲ ಬಾರಿಗೆ ಕ್ಯಾಮರಾಕ್ಕೆ ಪೋಸ್ ನೀಡಿರುವ ಉದ್ಯಮಿ ಆನಂದ್.ಸಿ.ಕುಂದರ್ ಸುಗಂಧಿಗೆ ಸನ್ಮಾನ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿಯವರ ಸಂಗೀತವಿರುವ ಈ ಚಿತ್ರದ ಚಿತ್ರಪ್ರದರ್ಶನದಲ್ಲಿ ಹಿರಿಯ ನಟ ನಿರ್ದೇಶಕ ನಿರ್ಮಾಪಕ ಸದಾನಂದ ಸುವರ್ಣರ ತಂತ್ರಗಾರಿಕೆಯನ್ನು ಅನುಸರಿಸಿರುವ ಕೋಟ ಕಾಲೇಜಿನ ಶಿಕ್ಷಕರಾಗಿದ ನರೇಂದ್ರ ಕುಮಾರ್ ಅವರು ಈ ಚಿತ್ರದ ನಿರ್ಮಾಪಕರು. ಉಡುಪಿ (ucn) ಚಾನೆಲ್‌ನಲ್ಲಿ ಅನೇಕ ಪ್ರತಿಭಾವಂತರನ್ನು ನಾಡಿನ ಜನತೆಗೆ ಪರಿಚಯಿಸಿದ್ದಾರೆ! ತಮ್ಮಲ್ಲಿ ಪ್ರತಿಭೆಯಿದ್ದು ಸಾಧಿಸುವ ಛಲವಿದ್ದರೆ ಗುರುವಿನ ಬಲವಿದ್ದರೆ, ದಾರಿ ಎಷ್ಟೇ ಕಠಿಣವಿದ್ದರು ಗುರಿ ತಲುಪಬಹುದು ಅನ್ನುವ ಸಂದೇಶ ನೀಡುವ ಈ ಚಿತ್ರದ ಪ್ರಮುಖ ಪಾತ್ರ ವಹಿಸಿದ ವೈಷ್ಣವಿಯೆಂಬ ಬಾಲ ಕಲಾವಿದೆಯ ಪಾತ್ರವಿಮರ್ಶೆ ಮಾತ್ರ ಚಿತ್ರ ಪ್ರೇಕ್ಷಕರಿಗೆ ಬಿಟ್ಟಿದು. ಎಲ್ಲವನ್ನು ನಾನೇ ಹೇಳಿದರೆ ಸಾಲದು. ನೀವು ಕೂಡ ಚಿತ್ರ ನೋಡಿ ನಿಮಗನಿಸಿದ್ದನ್ನು ಚಿತ್ರ ತಂಡದೊಂದಿಗೆ ಹಂಚಿಕೊಳ್ಳಿ ಅನ್ನುವ ಆಶಾಭಾವನೆ ನನ್ನದು.

-ಪಿ ವಿಜಯ್ ಗಂಗೊಳ್ಳಿ
‘ಸ್ವಾಮಿ ಕೃಪಾ’

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!