spot_img
Friday, March 27, 2026
spot_img

ಗಂಗೊಳ್ಳಿಯಲ್ಲಿ ‘ಹರಿ ಓಂ ಟ್ರೋಫಿ-2022’ ಪಂದ್ಯಾಟ

ಕುಂದಾಪುರ: ಹರಿ ಓಂ ಗಂಗೊಳ್ಳಿ ಇವರ ಆಶ್ರಯದಲ್ಲಿ ಜರಗಿದ ಜಿ‌ಎಸ್‌ಬಿ ಸಮಾಜಬಾಂಧವರ 30 ಗಜಗಳ ಗಂಗೊಳ್ಳಿ ಜಿ‌ಎಸ್‌ಬಿ ಪ್ರೀಮಿಯರ್ ಲೀಗ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಹರಿ ಓಂ ಟ್ರೋಫಿ-2022 ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು.

ಭಾನುವಾರ ಸಂಜೆ ನಡೆದ ಅಂತಿಮ ಹಣಾಹಣಿಯಲ್ಲಿ ರೈಸಿಂಗ್ ಸ್ಟಾರ್ ತ್ರಾಸಿ ತಂಡ ಬಾವಜಿ ಇಲೆವೆನ್ ಗಂಗೊಳ್ಳಿ ತಂಡವನ್ನು ಸೋಲಿಸಿ ಹರಿ ಓಂ ಟ್ರೋಫಿ-೨೦೨೨ಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮೊದಲು ನಡೆದ ಉಪಾಂತ್ಯ ಪಂದ್ಯಾಟದಲ್ಲಿ ರೈಸಿಂಗ್ ಸ್ಟಾರ್ ತ್ರಾಸಿ ತಂಡವು ವಿ.ಕೆ.ಪೋವಾಸ್ ಗಂಗೊಳ್ಳಿ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶ ಪಡೆದಿದ್ದರೆ, ಬಾವಜಿ ಇಲೆವೆನ್ ತಂಡ ಆಡಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ನೇರವಾಗಿ ಫೈನಲ್ ಪ್ರವೇಶ ಪಡೆದುಕೊಂಡಿತ್ತು. ರೈಸಿಂಗ್ ಸ್ಟಾರ್ ತಂಡದ ಬಿ.ಗಣೇಶ ಶೆಣೈ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ವಿ.ಕೆ.ಪೋವಾಸ್ ತಂಡದ ಎಂ.ರಮೇಶ ಪೈ ಉತ್ತಮ ದಾಂಡಿಗ, ಎಂ.ಜಿ.ನಾಗಪ್ರಸಾದ್ ಪೈ ಉತ್ತಮ ಕ್ಷೇತ್ರರಕ್ಷಕ, ಬಾವಜಿ ಇಲೆವೆನ್ ತಂಡದ ಟಿ.ಗಣೇಶ ಪ್ರಭು ಉತ್ತಮ ಎಸೆತಗಾರ ಹಾಗೂ ರೈಸಿಂಗ್ ಸ್ಟಾರ್ ತ್ರಾಸಿ ತಂಡದ ಜಿ.ಶ್ರೇಯಸ್ ಶೆಣೈ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸೂರಾಲ್ ಮೋಹನದಾಸ ಶ್ಯಾನುಭಾಗ್, ಪುರೋಹಿತರಾದ ಜಿ.ಅಜಿತ್ ಭಟ್, ಉದ್ಯಮಿ ರಘುನಂದನ ನಾಯಕ್ ತ್ರಾಸಿ, ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ, ಡಾ.ಕಾಶೀನಾಥ ಪೈ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಹರಿ ಓಂ ಸಂಸ್ಥೆಯ ಎಂ.ನಾಗೇಶ ಪೈ, ಜಿ.ಸುದರ್ಶನ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಉದ್ಘಾಟನೆ : ಪಂದ್ಯಾಟವನ್ನು ಗಂಗೊಳ್ಳಿ ಶ್ರೀ ಅಂಬಿಕಾ ದೇವಸ್ಥಾನದ ಅರ್ಚಕ ಜಿ.ವಸಂತ ಭಟ್ ಉದ್ಘಾಟಿಸಿದ್ದರು. ನಿವೃತ್ತ ಬ್ಯಾಂಕ್ ಅಧಿಕಾರಿ ಎಂ.ಜಿ. ಮಾಧವ ಪೈ, ಜಿ.ರೋಹಿದಾಸ ನಾಯಕ್, ಉದ್ಯಮಿ ಜಿ.ದಿನೇಶ ನಾಯಕ್ ಶುಭ ಹಾರೈಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!