Sunday, September 8, 2024

ಸಿದ್ದಾಪುರ ಪ್ರೌಢಶಾಲೆಯಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆ ಉದ್ಘಾಟನೆ

ಸಿದ್ಧಾಪುರ: ಸೇವೆ ಭಗವಂತನಿಗೆ, ಆರಾಧನೆ ಭಕ್ತನಿಗೆ, ಸದಾ ರಾಷ್ಟ್ರಸೇವೆಗೆ ಬದ್ದ ಆದವನೇ ನಿಜವಾದ ದೇಶಭಕ್ತ. ಈ ದೇಶಭಕ್ತಿ ಸದಾ ನಮ್ಮಲ್ಲಿ ಹಸಿರಾಗಿರಲಿ ಎಂದು ಸಾಹಿತಿ ಮುಸ್ತಾಕ್ ಹೆನ್ನಾಬೈಲು ಹೇಳಿದರು.

ಸರ್ಕಾರಿ ಪ್ರೌಢಶಾಲೆ ಸಿದ್ದಾಪುರ ಎನ್.ಎಸ್.ಎಸ್ ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ದೀಪ ಬೆಳಗಿಸುವ ಮೂಲಕ ಸಿದ್ದಾಪುರದ ವೈದ್ಯ, ಯಕ್ಷಪಟು ಡಾ.ಜಗದೀಶ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದ ಜಗದೀಶ್ ಶೆಟ್ಟಿ, ಧರ್ಮೇಶ್, ಅಲ್ಬಾಡಿ ವಸಂತ್ ಶೆಟ್ಟಿ, ಸಂಗೀತ ಭಟ್ಟ, ಗಣೇಶ್ ಕಾಮತ್ ಅವರನ್ನು ಗೌರವಿಸಲಾಯಿತು. ಅತ್ಯುತ್ತಮ ಸಾಧನೆ ತೋರಿದ ಸ್ವಯಂ ಸೇವಕರಾದ ವೈಷ್ಣವಿ ಶೆಟ್ಟಿ, ಅನನ್ಯ ಸಿ,ಪ್ರಗತಿ, ಆಶಿಕ ಶೆಟ್ಟಿ, ಕೃತಿ ಶೆಟ್ಟಿ, ಧೀರಜ್ ಅವರನ್ನು ಅತ್ಯುತ್ತಮ ಎನ್‌ಎಸ್‌ಎಸ್ ಪಟು ಅಭಿದಾನ ನೀಡಿ ಗೌರವಿಸಲಾಯಿತು.

ಪತ್ರಿಕೆಯ ಕಣ್ಣಲ್ಲಿ ಶಾಲಾ ಬಿಂಬ ಎಂಬ ಪತ್ರಿಕಾ ಲೇಖನಗಳ ಪುಸ್ತಿಕೆಯನ್ನು ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಎನ್‌ಎಸ್‌ಎಸ್ ಪರಿಚಯ ಪುಸ್ತಕ ಹಾಗೂ ಬ್ಯಾಜ್ ವಿತರಿಸಲಾಯಿತು.

ಎನ್ನೆಸ್ಸೆಸ್ ಅಧಿಕಾರಿ ರಮಾನಂದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ಪಂದನ ಉಲ್ಲೂರ್ ಹಾಗೂ ಸಾನ್ವಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉದಯ ಗಾಂವಕಾರ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರವೀಂದ್ರ ಶೆಟ್ಟಿ ಹಾಗೂ ಬಾಲಕೃಷ್ಣ ಶೆಟ್ಟಿ ಸಹಕರಿಸಿದರು. ಶಿಕ್ಷಕರು, ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!