16.1 C
New York
Friday, October 22, 2021

Buy now

spot_img

ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ


ಕುಂದಾಪುರ :ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಕ್ಟೋಬರ್ 7 ಗುರುವಾರದಿಂದ ಅ.15 ಶುಕ್ರವಾರದ ತನಕ ನಡೆಯಲಿದೆ. ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ಚಂಡಿಕಾ ಪಾರಾಯಣ, ಕಲ್ಪೋಕ್ತ ಪೂಜೆ, ಚಂಡಿಕಾ ಹೋಮ ನಡೆಯಲಿದೆ.

ಕೊರೋನಾ-19 ಮಾರ್ಗಸೂಚಿಯಂತೆ ಸರಳವಾಗಿ ನವರಾತ್ರ್ಯೋತ್ಸವ ನಡೆಯಲಿದೆ.
ದಿನಾಂಕ 7 ಗುರುವಾರ: ಶ್ರೀಮತಿ ಲೀಲಾವತಿ ಮತ್ತು ಶ್ರೀನಿವಾಸ ರಾವ್, ಎಂ.ಡಿ ರೆಸಿಡೆನ್ಸಿ, 8ನೇ ಮಹಡಿ, ರೂಮ್ ನಂ.810 ಹೆಮ್ಮಾಡಿ, ದಿನಾಂಕ 8 ಶುಕ್ರವಾರ: ಶ್ರೀಮತಿ ಮೀನ ಮತ್ತು ಶ್ರೀ ಮಂಜು ಎನ್ ಚಂದನ್, ಸುರಬಿ, ಗಣೇಶ ನಗರ ಕುಂಭಾಶಿ ಮತ್ತು ಪ್ರಿಯದರ್ಶಿನಿ ಪರ್ಸಿನ್ ಬೋಟ್, ಪ್ರೊ-ಶ್ರೀಮತಿ ಮತ್ತು ಶ್ರೀ ಕೆ.ರಾಮ ನಾಯ್ಕ್ ಹಾಗೂ ಮಕ್ಕಳು, ಕೋಡಿ, ಕುಂದಾಪುರ, ದಿನಾಂಕ 9 ಶನಿವಾರ : ಶ್ರೀಮತಿ ಪ್ರಿಯಾ ಮತ್ತು ಶ್ರೀ ಅಶೋಕ್ ವಿಠಲವಾಡಿ ಕುಂದಾಪುರ (ಪ್ರೊ: ಸ್ಯಾನ್‌ಜೋಸ್ ವೆಲ್ತ್ ಮ್ಯಾನೇಜ್ ಮೆಂಟ್), ಹಾಗೂ ಶ್ರೀಮತಿ ಮಾಲಿನಿ ಮತ್ತು ಶ್ರೀ ರಾಜೇಶ್ ಹಾಗೂ ಮಕ್ಕಳು ಶ್ರೀ ಭದ್ರಮಹಂಕಾಳಿ ನಿಲಯ ಬಟ್ಟೆಕುದ್ರು, ದಿನಾಂಕ 10 ಆದಿತ್ಯವಾರ:ಶ್ರೀಮತಿ ಶೋಭಾ ಮತ್ತು ಶ್ರೀ ಗೋವಿಂದ ಪುತ್ರನ್, ಹರೆಗೋಡು, ಕಟ್ ಬೇಲ್ತೂರು ಮತ್ತು ಶ್ರೀ ವಿವೇಕಾನಂದ ಮೂರ್ತಿ ಮತ್ತು ಕುಟುಂಬಸ್ಥರು, ಬೆಂಗಳೂರು, ದಿನಾಂಕ 11 ಸೋಮವಾರ: ಶ್ರೀಮತಿ ಮತ್ತು ಶ್ರೀ ಶಿವ ಜಿ.ನಾಯ್ಕ್ ಮತ್ತು ಕುಟುಂಬಿಕರು, ದೀನಬಂಧು ಕಾಲೋನಿ, ಹುಬ್ಬಳ್ಳಿ, ದಿನಾಂಕ 12 ಮಂಗಳವಾರ: ಶ್ರೀ ದೀಪಕ್ ಮತ್ತು ಕುಟುಂಬಸ್ಥರು, ಹೇರಿಕುದ್ರುಮನೆ, ಕಟ್ ಬೇಲ್ತೂರು ಮತ್ತು ಶ್ರೀಮತಿ ಪವಿತ್ರ ಎಸ್.ಪುತ್ರನ್ ಮತ್ತು ಶ್ರೀ ಸದಾನಂದ ಬಳ್ಕೂರು, ಕು|ಪ್ರಾಂಜಲ್, ಕು|ಮಿನಲ್, ಬಡಾಬೈಲುಮನೆ, ಬಳ್ಕೂರು, ದಿನಾಂಕ 13 ಬುಧವಾರ: ಶ್ರೀಮತಿ ಲತಾ ಮತ್ತು ಗಣಪತಿ ನಾಯ್ಕ್, ಶೇಷಿ ನಿಲಯ, ಆನಗಳ್ಳಿ ಮತ್ತು ಶ್ರೀಮತಿ ಗೀತಾ ಮತ್ತು ಶ್ರೀ ಆನಂದ ಬರೆಕಟ್ಟು ಹಾಗೂ ಅಭಿಲಾಶ್ ಮತ್ತು ಅನುಷ, ಮಹಿಷಮರ್ದಿನಿ ನಿಲಯ, ಮಾರ್ಕೋಡು ಕೋಟೇಶ್ವರ, ದಿನಾಂಕ 14 ಗುರುವಾರ :ಶ್ರೀಮತಿ ಶಾಲಿನಿ ಮತ್ತು ಶ್ರೀ ಕರುಣಾಕರ ಹಾಗೂ ಕು.ಕೌಶಿಕ್ ಮತ್ತು ಕು.ಶ್ರಾವಣಿ ಬೈಲಾಡಿ, ಕೂಕನಾಡು, ದೇವಲ್ಕುಂದ ಇವರ ಸೇವೆಯಾಗಿ ಚಂಡಿಕಾಯಾಗ ನಡೆಯಲಿದೆ.

ದಿನಾಂಕ 15-ಶುಕ್ರವಾರ:ವಿಜಯದಶಮಿಯಂದು ಶ್ರೀಮತಿ ಮತ್ತು ಶ್ರೀ ಗೋಪಾಲ ಎಸ್.ಪುತ್ರನ್ ಮತ್ತು ಕುಟುಂಬಸ್ಥರು, ಮಾಕಿಮನೆ, ಸುಳ್ಸೆ ಹಾಗೂ ಶ್ರೀಮತಿ ಮತ್ತು ಶ್ರೀ ಎಂ.ವಿ ಬಂಗೇರ, ಉದ್ಯಮಿ ಓವರ್‌ಸೀಸ್ ಫ್ರೈ.ಲಿ ಕೊರವಡಿ, ಕುಂದಾಪುರ ಇವರ ಸೇವೆಯಾಗಿ ನವಚಂಡಿಕಾಯಾಗ ನಡೆಯಲಿದೆ.
ಆ ದಿನ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು, ಸೇವಾಕರ್ತರು: ಶ್ರೀ ಸುರೇಶ ಶೀನ ಮೊಗವೀರ, ಸಣ್ಣಮನೆ, ಗಂಗೆಬೈಲು ನಾಗೂರು, ಬೈಂದೂರು.

ಅ.7ರಿಂದ ಅ.15ರ ತನಕ ನಡೆಯಲಿರುವ ಶರನ್ನವರಾತ್ರಿಯಲ್ಲಿ ಭಕ್ತಾಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!