14.9 C
New York
Tuesday, December 7, 2021

Buy now

spot_img

ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ಶಿಲಾ ಪ್ರತಿಮೆ ಹಾಗೂ ಸ್ಮಾರಕ ಅನಾವರಣ


ಕುಂದಾಪುರ: ದೇವರ ಪೂಜೆ, ಶೃದ್ಧೆ, ಭಕ್ತಿ, ಧಾರ್ಮಿಕ ಆಚರಣೆಗೆ ಹಟ್ಟಿಯಂಗಡಿ ರಾಮಚಂದ್ರ ಭಟ್ಟರು ಮಾದರಿಯಾಗಿದ್ದರು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಅವರು ಹಟ್ಟಿಯಂಗಡಿಯಲ್ಲಿ ನಿರ್ಮಾಣ ಮಾಡಲಾದ ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ಶಿಲಾ ಪ್ರತಿಮೆ ಹಾಗೂ ಸ್ಮಾರಕವನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.


ರಾಜ್ಯದಲ್ಲಿನ ಎಲ್ಲಾ ದೇವಸ್ಥಾನಗಳಲ್ಲಿ ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ಪೂಜಾ ಪದ್ಧತಿ, ಶೃದ್ಧೆ, ನಂಬಿಕೆ, ಆಚಾರ-ವಿಚಾರ, ಭಕ್ತರಲ್ಲಿ ಮೂಡಿಸುವ ನಂಬಿಕೆ, ತೋರಿಸುವ ಪ್ರೀತಿ ಅನುಸರಿಸಿಕೊಂಡಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ನಮ್ಮ ರಾಜ್ಯ ಸುಭಿಕ್ಷವಾಗುತ್ತದೆ ಎನ್ನುವುದನ್ನು ಈ ಹಿಂದೆ ವಿಧಾನ ಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಶಾಸಕರು, ಸಂಸದರು, ಧಾರ್ಮಿಕ ಮುಖಂಡರ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದನ್ನು ಸ್ಮರಿಸಿಕೊಂಡ ಅವರು ರಾಮಚಂದ್ರ ಭಟ್ಟರು ಪೂಜಾ ಪದ್ಧತಿಗೆ ಮಾದರಿಯಾಗಿದ್ದರು ಎಂದರು.


ಸಂಜೆ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಸಿದ್ಧಿ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಹಾಗೂ ಸಾಗರದ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಹಟ್ಟಿಯಂಗಡಿಯಲ್ಲಿ ತಾವು ಅಂದುಕೊಂಡಿದನ್ನು ಸಾಧಿಸಿ ತೋರಿಸಿದ ರಾಮಂದ್ರ ಭಟ್ಟರ ಶೃದ್ಧಾ ಭಕ್ತಿಗೆ ತಾವೂ ಕೂಡಾ ಮಾರು ಹೋಗಿದ್ದನ್ನು ಉದಾಹರಣೆ ಸಹಿತ ವಿವರಿಸಿದರು. ಅನೇಕ ಬಾರಿ ತಾವು ಸಾಧ್ಯವಿಲ್ಲ ಎಂದು ಕೊಂಡಿದ್ದನ್ನು ಭಟ್ಟರು ಸಾಧಿಸಿದ್ದರು, ಅವರು ಭಕ್ತರಲ್ಲಿ ಇಟ್ಟಿರುವ ವಿಶ್ವಾಸವೇ ಇದಕ್ಕೆಲ್ಲ ಕಾರಣ ಎಂದೂ ಹೇಳಿದರು.


ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ,ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ, ಕರ್ಣಾಟಕ ಬ್ಯಾಂಕಿನ ಆಡಳಿತ ವ್ಯವಸ್ಥಾಪಕ ಮಹಾಬಲೇಶ್ವರ ಎಂ.ಎಸ್., ಧರ್ಮಸ್ಥಳದ ಭುಜಬಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ವೇ.ಮೂ. ಬಾಲಚಂದ್ರ ಭಟ್ಟ ಅವರು ಹಟ್ಟಿಯಂಗಡಿ ಕ್ಷೇತ್ರ ಬೆಳೆದು ಬಂದ ದಾರಿಯನ್ನು ವಿವರಿಸುತ್ತಾ ರಾಮಚಂದ್ರ ಭಟ್ಟರ ಧರ್ಮಪತ್ನಿ ರಮಾದೇವಿ ಹಾಗೂ ಕುಟುಂಬಿಕರ ಇಚ್ಚೆಯಂತೆ ಸ್ಮಾರಕ ನಿರ್ಮಾಣ ಮಾಡಿದ್ದು, ಅವರ ಸಾಧನೆ ತಮಗೆಲ್ಲರೂ ದಾರಿದೀಪವಾಗಿದೆ ಎಂದರು.


ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮೃತಾ ಭಂಡಾರಿ, ರಾಮಚಂದ್ರ ಭಟ್ಟರ ಧರ್ಮಪತ್ನಿ ರಮಾದೇವಿ, ಪುತ್ರ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣಕುಮಾರ್, ದಿವ್ಯಾ ರಾಜೇಂದ್ರಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ದೇವಾಲಯಗಳಿಗೆ ಹಾಗೂ ಅಶಕ್ತರಿಗೆ ಸಹಾಯಧನ ವಿತರಣೆಯನ್ನು ಮಾಡಲಾಯಿತು.

Related Articles

Stay Connected

21,961FansLike
3,046FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!