21.3 C
New York
Friday, September 17, 2021

Buy now

spot_img

ಸೂರ್ಗೋಳಿ ಶಾಲಾ ಮುಖ್ಯ ಶಿಕ್ಷಕ ಸದಾನಂದ ನಾಯಕ್ ರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ


ಉಡುಪಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆದರ್ಶ ಆಸ್ಪತ್ರೆ ಉಡುಪಿ ಇವರ ಆಶ್ರಯದಲ್ಲಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮ ಜಯಂತಿ ಪ್ರಯುಕ್ತ ನೀಡುವ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಯು ಕುಂದಾಪುರ ವಲಯದ ಸೂರ್ಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಸದಾನಂದ ನಾಯಕ್ ಕೊಕ್ಕರ್ಣೆ ಇವರಿಗೆ ಲಭಿಸಿದೆ.


ಸೆ.7ರಂದು ಉಡುಪಿ ಆದರ್ಶ ಆಸ್ಪತ್ರೆ ಯ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕರಾದ ಶ್ರೀ ರಘುಪತಿ ಭಟ್ ರವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.


29 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಇವರು ಕಳೆದ 10 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸದಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸಿದ್ದಾರೆ. ಸದಾ ಸರಳ ಜೀವನ ನಡೆಸುತ್ತಾ ಶಾಲೆಯಲ್ಲಿ ನಿರಂತರವಾಗಿ ಒಂದಲ್ಲಾ ಒಂದು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮುದಾಯದವರನ್ನು, ಹಳೆ ವಿದ್ಯಾರ್ಥಿಗಳನ್ನು, ಶಿಕ್ಷಕ ವೃಂದದವರನ್ನು ಶಾಲಾಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಶಾಲಾ ಗುಣಮಟ್ಟವನ್ನು ಎತ್ತರಿಸುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ನಿರಂತರ ಕ್ರಿಯಾಶೀಲರಾಗಿರುವ ಇವರು ಅಗಾಧ ವಿಷಯ ಜ್ಞಾನಿ, ಪರಿಸರ ಪ್ರೇಮಿ, ಮಕ್ಕಳ ಸ್ನೇಹಿಯಾಗಿದ್ದು ಇವರ ಸಾರರ್ಥದಲ್ಲಿ ಶಾಲೆಯು ಸತತವಾಗಿ 4 ಬಾರಿ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ಪಡೆದಿದೆ. ಪಾರಂಪರಿಕ ಔಷಧಿ ಸಸ್ಯಗಳು, ಪರಿಸರ ಸ್ನೇಹಿ ಚಟುವಟಿಕೆಗಳ ಕುರಿತು ವಿಶೇಷ ಆಸಕ್ತಿ, ನಕ್ಷತ್ರಗಳನ್ನು ಗುರುತಿಸುವುದು, ಪುರಾಣ ಕಥೆಗಳು, ಸಂಗೀತದಲ್ಲಿ ವಿಶೇಷ ಒಲವು, ಬದಲಾಗುತ್ತಿರುವ ಟೆಕ್ನಾಲಜಿಗೆ ಹೊಂದಿಕೊಳ್ಳುವುದರಲ್ಲಿ ಇವರ ಆಸಕ್ತಿ, ವಿದ್ಯಾರ್ಥಿಗಳ ಭೌದ್ದಿಕ ವಿಕಾಸಕ್ಕೂ ಕಾರಣವಾಗಿದೆ.

Related Articles

Stay Connected

21,961FansLike
2,941FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!