20.8 C
New York
Saturday, July 24, 2021

Buy now

spot_img

ಕುಂದಾಪುರ ಯುವ ಬಂಟರ ಸಂಘದ ವತಿಯಿಂದ ಕೊವಿಡ್ ಆಸ್ಪತ್ರೆಗೆ ರೂ.52 ಸಾವಿರ ಮೌಲ್ಯದ ವೈದ್ಯಕೀಯ ಸಲಕರಣೆ ಕೊಡುಗೆ


ಕುಂದಾಪುರ, ಜೂ.12: ಕುಂದಾಪುರ ಯುವ ಬಂಟರ ಸಂಘದ ವತಿಯಿಂದ ಕುಂದಾಪುರ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ಸುಮಾರು 52 ಸಾವಿರ ರೂ. ಮೌಲ್ಯದ ತುರ್ತು ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆಯಾಗಿ ನೀಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಯುವ ಬಂಟರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಯುವ ಬಂಟರ ಸಂಘ ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ಸೇವೆ ನೀಡುತ್ತಿದೆ. ಇವತ್ತು ಕೋವಿಡ್ ಆಸ್ಪತ್ರೆಗೆ ಸುಮಾರು 52 ಸಾವಿರ ರೂ ಮೌಲ್ಯದ ವೈದ್ಯಕೀಯ ಸಲಕರಣೆಗಳು ಡಾ|ನಾಗೇಶ್ ಅವರ ಅಪೇಕ್ಷೆಯಂತೆ ನೀಡಲಾಗುತ್ತಿದೆ. ಹಾಗೆಯೇ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ.25 ಸಾವಿರ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು, ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ.20 ಸಾವಿರ ಮೌಲ್ಯದ ಔಷಧಿಗಳನ್ನು ನೀಡಲಾಗಿದೆ ಎಂದರು.


ಕುಂದಾಪುರ ಕೋವಿಡ್ ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ|ನಾಗೇಶ ಕೊಡುಗೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ ಶೆಟ್ಟಿ‌ಒ ಮಚ್ಚಟ್ಟು, ಕೋಶಾಧಿಕಾರಿ ನಿತಿನ್ ಶೆಟ್ಟಿ ಹುಂಚನಿ, ಉಪಾಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು, ಸಚಿನ್ ಶೆಟ್ಟಿ ಹುಂಚನಿ, ಡಾ| ರಜತ್, ಆಸ್ಪತ್ರೆ ವೈದ್ಯರುಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
2,866FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!