20.8 C
New York
Saturday, July 24, 2021

Buy now

spot_img

ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದಿಂದ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ.50 ಸಾವಿರ ಮೌಲ್ಯದ ಪರಿಕರ ಕೊಡುಗೆ


ಕುಂದಾಪುರ, ಜೂ.12: ಮೂರ್ತೆದಾರರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ವತಿಯಿಂದ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳಿಗೆ ಗೌರವ ಧನ ಹಾಗೂ ಸುಮಾರು 50 ಸಾವಿರ ಮೌಲ್ಯದ ಸ್ಯಾನಿಟೈಸರ್, ಮಾಸ್ಕ್ ಇತ್ಯಾದಿ ಪರಿಕರಗಳನ್ನು ನೀಡಲಾಯಿತು.


ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉದಯ ಪೂಜಾರಿ ಬಡಾಕೆರೆ ಕೊಡುಗೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಚಿಕ್ಮರಿ ಅವರಿಗೆ ಹಸ್ತಾಂತರಿಸಿದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಕೃಷ್ಣ ಪೂಜಾರಿ ಬಡಾಕೆರೆ ಮಾತನಾಡಿ, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರ ಕೊರೋನಾ ನಿಯಂತ್ರಣದಲ್ಲಿ ವಿಶೇಷ ಮುತುವರ್ಜಿ ವಹಿಸಿದೆ. ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇಲ್ಲಿನ ಕೊರೋನಾ ವಾರಿಯರ್ಸ್‌ಗಳ ಸೇವೆ ಶ್ಲಾಘನೀಯವಾದುದು ಎಂದರು.


ಸಂಘದ ನಿರ್ದೇಶಕ ಶೇಖರ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊಡುಗೆ ಸ್ವೀಕರಿಸಿದ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಚಿಕ್ಮರಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 11 ಆಶಾ ಕಾರ್ಯಕರ್ತೆಯರು, 10 ಮಂದಿ ಆರೋಗ್ಯ ಸಿಬ್ಬಂದಿಗಳಿಗೆ ಗೌರವ ಕಾಣಿಕೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕಟ್‌ಬೇಲ್ತೂರು, ಹೆಮ್ಮಾಡಿ ಪರಿಸರದ ಆರ್ಹ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.

Related Articles

Stay Connected

21,961FansLike
2,866FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!