19 C
New York
Monday, June 14, 2021

Buy now

spot_img

ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ರದ್ದು ಗೊಳಿಸಲು ಉಡುಪಿ ಜಿಲ್ಲಾ ಎಸ್ಡಿ‌ಎಂಸಿ ಸಮನ್ವಯ ವೇದಿಕೆಯಿಂದ ಮನವಿ


ಕುಂದಾಪುರ: ಕರ್ನಾಟಕ ರಾಜ್ಯದ ಸಿಲೆಬಸ್‌ನಲ್ಲಿ ಓದುತ್ತಿರುವ ನಮ್ಮ ಮಕ್ಕಳ ಮೇಲೆ ಪರೀಕ್ಷೆ ಎಂಬ ಹೊರೆಯನ್ನು ಕೊಡುತ್ತಿರುವುದು ತಾರತಮ್ಯತೆಯ ಪರಮಾವಧಿ ಆಗಿದ್ದು ಸಚಿವರೂ ಕೂಡಲೇ ತಮ್ಮ ನಿರ್ಧಾರವನ್ನು ಹಿಂಪಡೆದು ಮಕ್ಕಳ ಹಾಗು ಪಾಲಕರ ಆತಂಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು 10ನೇ ತರಗತಿ ಪರೀಕ್ಷೆಗಳನ್ನು ಕೂಡ ರದ್ದು ಮಾಡುವಂತೆ ಉಡುಪಿ ಜಿಲ್ಲಾ ಎಸ್ಡಿ‌ಎಂಸಿ ಸಮನ್ವಯ ವೇದಿಕೆಯು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.


ಕೊರೋನ ಮಹಾಮಾರಿಯು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಸರಿಯಾದ ರೀತಿಯ ಪಾಠ ಪ್ರವಚನ ಇಲ್ಲದೆ ಭಾಧಿಸಿರುವುದನ್ನು ಮನಗಂಡು ಹಾಗೂ ಆ ಮಕ್ಕಳ ಆರೋಗ್ಯದ ಬಗೆಗಿನ ಕಾಳಜಿಯಿಂದ ಮಾನ್ಯ ಪ್ರಧಾನ ಮಂತ್ರಿಯ ಅಧ್ಯಕ್ಷತೆಯಲ್ಲಿರುವ ಸಮಿತಿಯು ದೇಶದಲ್ಲಿ ಐ.ಸಿ.ಎಸ್.ಇ ಮತ್ತು ಸಿ.ಬಿ.ಎಸ್ ಇ ಮಂಡಳಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿದ್ದು, ಅದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಸರಕಾರ ಕೂಡ ಪಿ ಯು ಸಿ ಪರೀಕ್ಷೆಯನ್ನು ರದ್ದು ಗೊಳಿಸಲಾಗಿದೆ.


ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ 10 ನೇ ತರಗತಿ ಪರೀಕ್ಷೆಯನ್ನು ನಡೆಸುವುದಾಗಿ ಪ್ರಕಟಿಸಿರುವುದು ನಿಜಕ್ಕೂ ಹಾಸ್ಯಾಸ್ಪದ. ಅದಕ್ಕೆ ಇರುವ ತರ್ಕಾಧಾರ ಏನೆಂಬುದು ಅರ್ಥವಾಗುತ್ತಿಲ್ಲ.
ಸರ್ಕಾರ 10 ನೇ ತರಗತಿಯನ್ನು ರದ್ದುಗೊಳಿಸದಿರುವುದು ಅವೈಜ್ಞಾನಿಕ ಮಾತ್ರವಲ್ಲ ಶೈಕ್ಷಣಿಕವಾಗಿ ತಪ್ಪು ನಿರ್ಧಾರ. ಜೊತೆಗೆ ಈಗಾಗಲೇ ಉಳಿದ ಎರಡು ಮಂಡಳಿಗಳಾದ ಸಿಬಿ‌ಎಸ್‌ಇ ಮತ್ತು ಐ.ಸಿ.ಎಸ್ಇ. ಮಂಡಳಿಗಳು ತಮ್ಮ ಪರೀಕ್ಷೆಗಳನ್ನು ರದ್ದು ಮಾಡಿರುವಾಗ , ರಾಜ್ಯ ಮಂಡಳಿಯ ಪಠ್ಯಕ್ರಮಕ್ಕೆ ಸಂಯೋಜನೆಗೊಂಡಿರುವ ಮಕ್ಕಳ ಮೇಲೆ ಪರೀಕ್ಷೆ ಹೇರುವುದು ಅಮಾನವೀಯ, ತಾರತಮ್ಯ ಮತ್ತು ಶೈಕ್ಷಣಿಕವಾಗಿ ಅಪಕ್ವ, ಅಪ್ರಬುದ್ಧ ನಿರ್ಧಾರ ಎಂದಿರುವ ಸಮಿತಿಯ ಕರ್ನಾಟಕ ಎಸ್ಡಿ‌ಎಂಸಿ ಸಮನ್ವಯ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್, ವಿ, ನಾಗರಾಜ್, ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಅವನೀಶ ಹೊಳ್ಳ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Related Articles

Stay Connected

21,961FansLike
2,812FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!