11 C
New York
Thursday, May 13, 2021

Buy now

spot_img

ಜೀವ, ಜೀವನವನ್ನು ಪಣಕ್ಕಿಟ್ಟು ಅನಗತ್ಯ ತಿರುಗಾಟ ಮಾಡಬೇಡಿ-ಜನತೆಗೆ ಉಪವಿಭಾಗಾಧಿಕಾರಿಗಳ ಕಿವಿಮಾತು


ಕುಂದಾಪುರ, ಮೇ.4: ಈ ಹಿಂದೆ ಕರ್ನಾಟಕ ಸರ್ಕಾರದ ಆದೇಶದಂತೆ ಅಗತ್ಯ ವಸ್ತುಗಳ ಖರೀಧಿಗೆ ಬೆಳಿಗ್ಗೆ 10 ಗಂಟೆಯ ತನಕ ಅವಕಾಶವಿತ್ತು. ಆ ನಂತರ ಮೇ.1ರಂದು ಪರಿಷ್ಕೃತ ಆದೇಶ ಮಾಡಿ ದಿನಸಿ ಅಂಗಡಿಗಳು, ಎಪಿ‌ಎಂಸಿಯಲ್ಲಿ ಮಾರಾಟ ಮಾಡುವ ವಸ್ತುಗಳಿಗೆ ಮಧ್ಯಾಹ್ನ 12 ಗಂಟೆಯ ತನಕ ಅವಕಾಶ ನೀಡಲಾಗಿದೆ. ತರಕಾರಿ ಹಣ್ಣುಗಳ ತಳ್ಳುವ ಗಾಡಿಗಳಿಗೆ ಬೆಳಿಗ್ಗೆ 6ರಿಂದ ಸಂಜೆ ೬ ತನಕ ಆವಕಾಶವಿರುತ್ತದೆ. ಇದನ್ನು ಹೊರತು ಪಡಿಸಿ ಹಿಂದಿನ ಮಾರ್ಗಸೂಚಿಯಂತೆ ಮುಂದುವರಿಯುತ್ತದೆ. ಹಾಲಿನ ವ್ಯಾಪಾರಕ್ಕೆ ಅವರು ಅನುಮತಿ ಪಡೆದಂತೆ ಅವಕಾಶ ನೀಡಲಾಗಿದೆ. ಆದರೆ ಹಾಲಿನ ಜೊತೆಯಲ್ಲಿ ಇತರ ವಸ್ತುಗಳು, ಬೇಕರಿ ವಸ್ತುಗಳ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಕುಂದಾಪುರದ ಸಹಾಯಕ ಆಯುಕ್ತ ಕೆ.ರಾಜು ತಿಳಿಸಿದ್ದಾರೆ.


ಅವರು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಜನತೆ ಮನೆಯಿಂದ ಒಬ್ಬರು ಬಂದು ನಾಲ್ಕು ದಿನಕ್ಕಾಗುವಷ್ಟು ಆಹಾರ ಸಾಮಗ್ರಿ ತಗೆದುಕೊಂಡು ಹೋದರೆ ಕೊರೋನಾ ನಿಯಂತ್ರಣ ಸಾಧ್ಯವಿದೆ. ಕಳೆದ ಬಾರಿಗಿಂತ ಗಂಭೀರವಾಗಿದೆ. ಸಾವಿನ ಪ್ರಮಾಣವೂ ಹೆಚ್ಚಳವಾಗಿದೆ. ಹಾಗಾಗಿ ಪ್ರತಿಯೊಬ್ಬರು ಸ್ವಯಂ ಜಾಗೃತಿ ಮಾಡುವುದು ಅಗತ್ಯವಿದೆ. ಜನತೆ ಸ್ವಯಂ ಜಾಗೃತಿ ಮಾಡದಿದ್ದರೆ ಕಷ್ಟವಾದ ಪರಿಸ್ಥಿತಿ ಬರಬಹುದು. ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ದಿನಸಿ, ತರಕಾರಿ ಖರೀಧಿಸಲು ಸುಮ್ಮನೆ ಓಡಾಡುತ್ತಿರೆಂದರೆ ಅದರ ಪರಿಣಾಮ ಕೆಟ್ಟ ಪರಿಣಾಮ ಬೀರುತ್ತದೆ. ಸರ್ಕಾರ ಬೆಡ್‌ಗಳನ್ನು ಎಷ್ಟು ಬೇಕಾದರೂ ಸಿದ್ಧ ಪಡಿಸಬಹುದು. ಆದರೆ ಅಕ್ಷಿಜನ್ ಸಾಮರ್ಥ್ಯವಿದ್ದಷ್ಟೇ ವ್ಯವಸ್ಥೆ ಮಾಡಬಹುದು. ಹಾಗಾಗಿ ಜನ ಜಾಗೃತರಾಗಬೇಕು. ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ತಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

https://www.facebook.com/watch/?v=2840451146177229

Related Articles

Stay Connected

21,925FansLike
2,763FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!