9.3 C
New York
Thursday, May 13, 2021

Buy now

spot_img

ಕುಂದಾಪುರ: ಪರಿಷ್ಕೃತ ಆದೇಶ ಗೊಂದಲಕ್ಕಿಡಾದ ಜನ-ಅನವಶ್ಯಕ ವಾಹನ ಓಡಾಟ, ವಾಹನಗಳ ವಶಕ್ಕೆ


ಕುಂದಾಪುರ, ಮೇ.3: ಲಾಕ್‌ಡೌನ್ ಮಾದರಿಯ ಕರ್ಫ್ಯೂನಲ್ಲಿ ಸರಕಾರ ಹೊರಡಿಸಿದ್ದ ಪರಿಷ್ಕೃತ ಆದೇಶದಲ್ಲಿ ಅಗತ್ಯವಸ್ತುಗಳ ವ್ಯವಹಾರದ ಅಮಯವನ್ನು ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಿದ್ದನ್ನು ಕೆಲವರು ತಪ್ಪಾಗಿ ಅರ್ಥಮಾಡಿಕೊಂಡಿದ್ದು ಅನಗತ್ಯವಾಗಿ ಸೋಮವಾರ ಕುಂದಾಪುರದಲ್ಲಿ ವಾಹನದಲ್ಲಿ ತಿರುಗಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಲಾಗಿದೆ. ಅನಗತ್ಯವಾಗಿ ಸಂಚಾರಿಸುತ್ತಿದ್ದ ವಾಹನಗಳನ್ನು ತಡೆ ಹಿಡಿದು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಕೆಲವರಿಗೆ ದಂಡ ವಿಧಿಸಲಾಗಿದೆ.


ಅಗತ್ಯ ವಸ್ತುಗಳ ಖರೀದಿಗೆ ಮಾತ್ರ 12 ಗಂಟೆಯ ತನಕ ಅವಕಾಶವಿತ್ತು. ಆದರೆ ಕೆಲವರು ಅನಗತ್ಯವಾಗಿ ತಿರುಗಾಟ ಮಾಡುತ್ತಿರುವುದು ಕಂಡು ಬಂತು. ವಾಹನ ದಟ್ಟಣಿ ಹೆಚ್ಚುತ್ತಿರುವುದನ್ನು ಮನಗಂಡ ಆರಕ್ಷಕರು ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಶೀಲನೆಗೆ ಮುಂದಾದರು. ಈ ಸಂದರ್ಭ ಹಲವಾರು ಮಂದಿ ಅನಗತ್ಯ ಸಂಚಾರ ಮಾಡುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆ ವಾಹನಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಯಿತು.
ಕುಂದಾಪುರದ ಪಿ‌ಎಸ್.ಐ ಸದಾಸಿವ ಗವರೋಜಿ ಹಾಗೂ ಟ್ರಾಫಿಕ್ ಪಿ‌ಎಸ್.ಐ ಸುದರ್ಶನ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದರು.

Related Articles

Stay Connected

21,925FansLike
2,763FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!