11 C
New York
Thursday, May 13, 2021

Buy now

spot_img

ಮೈದಾನದಲ್ಲಿ ಕಣ್ಣೀರಿಟ್ಟ ಭಾರತೀಯ ಆಟಗಾರರ ವಿಭಿನ್ನತೆಯ ಚಿತ್ರಣ

-ಪಿ.ಎಸ್ ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ.

‘ಕ್ರಿಕೆಟ್ ‘ ಎನ್ನುವ ಮೂರುವರೆ ಅಕ್ಷರ ಎಂತಹ ಮೋಡಿಯನ್ನು ಮಾಡುತ್ತದೆ ಎಅಂಅನುವುದಕ್ಕೆ ಇಂದು ಕ್ರಿಕೆಟ್ ಅಭಿಮಾನಿಗಳು ವಿಶ್ವದೆಲ್ಲೆಡೆ ಇರುವುದೇ ಸಾಕ್ಷಿ . ಅದರಲ್ಲೂ ಭಾರತೀಯರ ಪಾಲಿಗೆ ಕ್ರಿಕೆಟ್ ಕೇವಲ ಆಟವಲ್ಲ , ಅದೊಂದು ಧರ್ಮ ಎಂಬ ಮಾತಿದೆ. ಅದಕ್ಕಾಗಿ ಭಾರತೀಯರು ಕ್ರಿಕೆಟಿನ ಸೋಲು – ಗೆಲುವನ್ನು ಗಂಭೀರವಾಗಿ ಪರಿಗಣಿಸುತ್ತಾರೆ . ಅದರಲ್ಲೂ ಭಾರತ ಆಡುವ ಪ್ರಮುಖ ಟೂರ್ನಿಗಳನ್ನು ಅಭಿಮಾನಿಗಳು ಬಹು ಕುತೂಹಲದಿಂದ, ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಒಂದುವೇಳೆ ಇಂತಹ ಪ್ರಮುಖ ಟೂರ್ನಿಗಳಲ್ಲಿ ಭಾರತ ಸೋತಿತು ಎಂದಾದರೆ , ಕ್ರಿಕೆಟಿಗರ ಮನೆಗಳಿಗೆ ಕಲ್ಲು ಹೊಡದಂತಹ ಸಂದರ್ಭಗಳೂ ಇವೆ.

ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಥಿತಿಯಾದರೆ , ಇನ್ನೂ ಆಟಗಾರರುಗಳಿಗೆ ಈ ಆಟವೇ ಸರ್ವಸ್ವವಾಗಿರುತ್ತದೆ. ಹೀಗಾಗಿಯೇ ಆಟಗಾರರು ಅನೇಕ ಬಾರಿ ತಮ್ಮ ಭಾವನೆಗಳನ್ನು ಹಿಡಿದಿಡಲು ಕಷ್ಟಪಟ್ಟ ಸಂದರ್ಭಗಳು ಕ್ರಿಕೆಟ್ ರಂಗದಲ್ಲಿ ಸಾಕಷ್ಟು ನಡೆದಿವೆ. ಪಂದ್ಯದ ಮಧ್ಯೆ ಭಾವುಕತೆಯೂ ಕಣ್ಣೀರಾಗಿ ಹರಿದ ಅನೇಕ ದೃಷ್ಟಾಂತಗಳು ಕ್ರಿಕೆಟ್ ಮೈದಾನದಲ್ಲಿ ನಡೆದಿವೆ. ಇಂತಹ ಸನ್ನಿವೇಶಗಳು ಸಾಕಷ್ಟು ನಡೆದು ಭಾರತೀಯ ಆಟಗಾರರು ಮೈದಾದದಲ್ಲೇ ಕಣ್ಣೀರು ಹಾಕಿದ ಸಂದರ್ಭಗಳು ಇವೆ. ಹೀಗೆ ಕಣ್ಣೀರು ಹಾಕಿದ ಐದು ಸಂದರ್ಭಗಳು ಮತ್ತು ಆ ಆಟಗಾರರ ಬಗ್ಗೆ ತಿಳಿಸುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.

ಕಣ್ಣೀರು ಹಾಕಿದ ವಿನೋದ ಕಾಂಬ್ಳಿ :
ಅದು 1996ರ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯ . ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ. ಈ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಆಘಾತಕರ ರೀತಿಯಲ್ಲಿ ಸೋಲನ್ನು ಕಂಡಿತ್ತು . ಗೆಲ್ಲುವ ಭರವಸೆಯಲ್ಲೇ ಇದ್ದ ಭಾರತೀಯ ತಂಡ , ಶ್ರೀಲಂಕಾವನ್ನು 250 ರನ್ಗೆ ಕಟ್ಟಿಹಾಕಿತ್ತು . ಈ ರನ್ ಚೇಸ್ ಮಾಡಿದ ಭಾರತ ತಂಡದ ಆರಂಭ ಕೂಡ ಚೆನ್ನಾಗಿತ್ತು . ಅರ್ಧ ಶತಕ ಬಾರಿಸಿದ್ದ ಸಚಿನ್ ತೆಂಡೂಲ್ಕರ್ ಔಟಾಗಿದ್ದೇ ಭಾರತ ತಂಡದ ಸ್ಥಿತಿಯೇ ಬದಲಾಗಿ ಬಿಟ್ಟಿತ್ತು. 98 ರನ್ಗಳಿಗೆ 1 ವಿಕೆಟ್ ಕಳೆದುಕೊಂಡು ಗೆಲುವಿನ ಭರವಸೆಯಲ್ಲಿದ್ದ ಭಾರತ ತಂಡ , ನಂತರ, 120 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಭಾರತದ ಧಿಡೀರ್ ಕುಸಿತವನ್ನು ಸಹಿಸದ ಅಭಿಮಾನಿಗಳು ಗದ್ದಲ ಗಲಾಟೆಯನ್ನು ಆರಂಭಿಸಿದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಪಂದ್ಯವನ್ನು ನಿಲ್ಲಿಸುವ ನಿರ್ಧಾರಕ್ಕೆ ಬರಲಾಯಿತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ವಿನೋದ್ ಕಾಂಬ್ಳಿ ಗಳಗಳನೆ ಕಣ್ಣೀರಿಡುತ್ತಾ ಪೆವಿಲಿಯನ್ ಕಡೆಗೆ ಹೆಜ್ಜೆಯಿಟ್ಟಿರುವುದನ್ನು ಕ್ರಿಕೆಟ್ ಅಭಿಮಾನಿಗಳು ಇಂದಿಗೂ ಮರೆಯಲು ಸಾಧ್ಯವಿಲ್ಲ.

ಹರ್ಭಜನ್ ಹೊಡೆತಕ್ಕೆ ಅತ್ತ ಶ್ರೀಶಾಂತ್:
ಅದು 2008ರ ಇಂಡಿಯನ್ ಪ್ರೀಮಿಯರ್ ಲೀಗಿನ ಆರಂಭಿಕ ಆವೃತ್ತಿ. ಈ ಮೊದಲ ಆವೃತ್ತಿಯಲ್ಲೇ ನಡೆಯಬಾರದ ಘಟನೆಯೊಂದು ನಡೆಯಿತು. ಮೊಹಾಲಿಯಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆಯಿತು . ಈ ಪಂದ್ಯದ ಅಂತ್ಯದಲ್ಲಿ ಪಂಜಾಬ್ ತಂಡದ ಬೌಲರ್ ಶ್ರೀಶಾಂತ್ ಅಳುತ್ತಿರುವುದು ಕಂಡು ಬಂದಿತ್ತು. ಇದು ಟಿವಿ ಕ್ಯಾಮರಾಗಳಲ್ಲೂ ಸೆರೆಯಾಗಿತ್ತು. ಮುಂಬೈ ಇಂಡಿಯನ್ಸ್ ತಂಡದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಎದುರಾಳಿ ತಂಡದ ಶ್ರೀಶಾಂತ್ಗೆ ಕಪಾಳಮೋಕ್ಷ ಮಾಡಿದ್ದರು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಈ ಘಟನೆಯ ಕಾರಣಕ್ಕಾಗಿ ಹರ್ಭಜನ್ ಸಿಂಗ್ ಟೂರ್ನಿಯ ಉಳಿದ ಪಂದ್ಯಗಳಿಂದ ನಿಷೇಧಕ್ಕೆ ಒಳಗಾದರು. ಬಳಿಕ ಈ ಘಟನೆಯ ಬಗ್ಗೆ ಹರ್ಭಜನ್ ಸಿಂಗ್ ಕ್ಷಮೆಯನ್ನೂ ಕೋರಿದ್ದರು.

ಯುವರಾಜ್ ಆನಂದಭಾಷ್ಪ :
ಭಾರತ ತಂಡಕ್ಕೆ ಮೊದಲ ವಿಶ್ವಕಪ್ ಒಲಿದದ್ದು 1983ರಲ್ಲಿ . ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಅಂದು ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಆದರೆ , ಮೊದಲ ವಿಶ್ವಕಪ್ ಗೆದ್ದ ಆ ಸಾಧನೆಯನ್ನು ಪುನರಾವರ್ತಿಸಲು ಭಾರತಕ್ಕೆ ನಂತರ 28 ವರ್ಷಗಳು ಬೇಕಾಯಿತು. ಹೌದು , ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2011ರಲ್ಲಿ ಆ ಕನಸು ನನಸಾಗಿತ್ತು. ಶ್ರೀಲಂಕಾ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಕೊಂಡಿತ್ತು . ನಾಯಕ ಮಹೇಂದ್ರ ಸಿಂಗ್ ಧೋನಿ ಸಿಕ್ಸರ್ ಬಾರಿಸುವ ಮೂಲಕ ಭಾರತ ವಿಶ್ವಕಪ್ ಗೆದ್ದ ಸಂಭ್ರಮವನ್ನು ಆಚರಿಸಿತು. ಈ ಅಪೂರ್ವ, ಐತಿಹಾಸಿಕ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ರೂವಾರಿ ಯುವರಾಜ್ ಸಿಂಗ್ . ಟೂನರ್ಿಯಲ್ಲಿ ನಾಲ್ಕು ಬಾರಿ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಯುವರಾಜ್ ಸಿಂಗ್ ಭಾರತ ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ತಮ್ಮ ಆಪ್ತ ಗೆಳೆಯ ಹರ್ಭಜನ್ ಸಿಂಗ್ ಅವರನ್ನು ಅಪ್ಪಿಕೊಂಡು ಆನಂದಭಾಷ್ಪ ಹರಿಸಿದರು. ತನ್ನ ದೇಶದ ಐತಿಹಾಸಿಕ ಗೆಲುವು ಯುವರಾಜ್ ಸಿಂಗ್ ಕ್ರಿಕೆಟ್ ಜೀವನದ ಸ್ಮರಣೀಯ ಘಳಿಗೆಯಾಗಿತ್ತು.

ಕಣ್ಣೀರು ಹಾಕಿದ ವಿರಾಟ್ ಕೊಹ್ಲಿ :
ಅದು 2012ರ ಟ್ವೆಂಟಿ-20 ವಿಶ್ವಕಪ್ ಪಂದ್ಯ . ಭಾರತವೇ ಟ್ವೆಂಟಿ-20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿತ್ತು . ಅದರಂತೆ ಲೀಗ್ ಹಂತದ ಪಂದ್ಯಗಳಲ್ಲಿ ಭಾರತ ಎದುರಾಳಿ ತಂಡಗಳ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿತ್ತು. ಆದರೆ , ಸೂಪರ್- 8 ಹಂತದ ಪ್ರಮುಖ ಪಂದ್ಯದಲ್ಲಿ ಭಾರತ ತಂಡ ಗೆದ್ದರೂ ಮುಂದಿನ ಹಂತಕ್ಕೆ ತೇರ್ಗಡೆಗೊಳ್ಳಲು ವಿಫಲವಾಯಿತು. ಎದುರಾಳಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 30ಕ್ಕೂ ಹೆಚ್ಚು ರನ್ಗಳಿಂದ ಭಾರತ ಗೆಲ್ಲಬೇಕಾದ ಒತ್ತಡದಲ್ಲಿತ್ತು. ಆದರೆ , ಈ ಪಂದ್ಯವನ್ನು ಗೆದ್ದರೂ ಗೆಲುವಿನ ಅಂತರ ಮಾತ್ರ ಒಂದು ರನ್ ಆಗಿದ್ದ ಕಾರಣ ಭಾರತ ಟೂನರ್ಿಯಿಂದ ಹೊರಬಿತ್ತು. ಈ ವೇಳೆ ಆಘಾತವನ್ನು ನಿಯಂತ್ರಿಸಲಾಗದೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಕಣ್ಣೀರು ಹಾಕಿದರು .

ವಿದಾಯದ ಕಣ್ಣೀರು ಹಾಕಿದ ಕ್ರಿಕೆಟ್ ದೇವರು:
ಭಾರತ ಕ್ರಿಕೆಟ್ ರಂಗದ ಲೆಜೆಂಡ್ ಆಟಗಾರ ; ಕ್ರಿಕೆಟ್ ದೇವರು ಎಂದು ಕರೆಯಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಕಣ್ಣೀರು ಹಾಕಿದ್ದು 2011ರ ವಾಂಖೆಡೆ ಸ್ಟೇಡಿಯಂನಲ್ಲಿ. ಇದು ಕೇವಲ ಕ್ರಿಕೆಟಿಗನೊಬ್ಬ ಮಾತ್ರವಲ್ಲ ಪ್ರತಿ ಅಭಿಮಾನಿಯೂ ಕಣ್ಣೀರು ಹಾಕಿದ ಸಂದರ್ಭ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಕ್ಷಣವದು. ಅದು ಕೂಡ ತನ್ನ ತವರಿನ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪಂದ್ಯ ಗೆದ್ದ ಸಂದರ್ಭದ ಅದು . ತನ್ನನ್ನು ಎತ್ತಿಕೊಂಡ ಆಟಗಾರರ ಹೆಗಲ ಮೇಲೆ ಕೂತು ಎರಡೂ ಕೈ ಬೀಸಿ ಸಚಿನ್ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಿದ್ದಾಗ ಗೊತ್ತಿಲ್ಲದೆ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಅಭಿಮಾನಿಗಳಂತೂ ಈ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ಇಂತಹ ಅಪೂರ್ವ ಕ್ಷಣದಲ್ಲಿ ಸಚಿನ್ ತೆಂಡೂಲ್ಕರ್ ಕಣ್ಣುಜ್ಜಿಕೊಂಡೇ ಪೆವಿಲಿಯನ್ಗೆ ಹೆಜ್ಜೆಯಿಟ್ಟಿದ್ದರು.

Related Articles

Stay Connected

21,925FansLike
2,763FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!