Sunday, September 8, 2024

ಮರು ಮೌಲ್ಯ ಮಾಪನದಿಂದ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ಮತ್ತೊಂದು ಸಾಧನೆಯ ಗರಿಮೆ

ಕುಂದಾಪುರ, ಆ.31: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಶಾನುಭಾಗ್ ಇಂಗ್ಲಿಷ್ ವಿಷಯದ ಮರು ಮೌಲ್ಯ ಮಾಪನದಲ್ಲಿ 92 ಅಂಕ ಪಡೆಯುವುದರ ಮೂಲಕ 588 ಅಂಕಗಳನ್ನು ದಾಖಲಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸತತ ಮೂರು ವರ್ಷಗಳಿಂದ ನೂರಕ್ಕೆ ನೂರು ಫಲಿತಾಂಶ ದಾಖಲಿಸುವುದರೊಂದಿಗೆ ಈ ವರ್ಷ ವಾಣಿಜ್ಯ ವಿಭಾಗದಲ್ಲಿ 4ನೇ ರ್‍ಯಾಂಕ್  ಮತ್ತು 10ನೇ ರ್‍ಯಾಂಕ್  ಹಾಗೂ ವಿಜ್ಞಾನ ವಿಭಾಗದಲ್ಲಿ 7 ಮತ್ತು 8ನೇ ರ್‍ಯಾಂಕ್  ಪಡೆದುಕೊಂಡಿರುವುದು ಸಾಧನೆಯ ಹಾದಿಗೆ ಪುಷ್ಠಿ ದೊರೆತಿದೆ.

ಕಾಲೇಜಿನ 5 ವಿದ್ಯಾರ್ಥಿಗಳು ಮರುಮೌಲ್ಯ ಮಾಪನದಲ್ಲಿ ಹೆಚ್ಚುವರಿ ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ರೀತು ಆರ್.ಖಾರ್ವಿ ಇಂಗ್ಲಿಷ್ ವಿಷಯದಲ್ಲಿ 9 ಅಂಕ, ನೀತಿ ಶೆಟ್ಟಿ ಗಣಿತ ವಿಷಯದಲ್ಲಿ 4 ಅಂಕ, ಪ್ರಾಚಿ ಎಸ್.ದೇವಾಡಿಗ ಹಿಂದಿ ವಿಷಯದಲ್ಲಿ 1 ಅಂಕ ಹಾಗೂ ವಾಣಿಜ್ಯ ವಿಭಾಗದಲ್ಲಿ ದೀಕ್ಷಾ ಶಾನುಭಾಗ್ ಇಂಗ್ಲಿಷ್ ವಿಷಯದಲ್ಲಿ 9 ಅಂಕ, ರಾಮ್‍ನಾಥ್ ಶೆಣೈ ಹಿಂದಿ ವಿಷಯದಲ್ಲಿ 11 ಅಂಕ ಪಡೆಯುವುದರೊಂದಿಗೆ ಒಟ್ಟು ಫಲಿತಾಂಶವನ್ನು ಹೆಚ್ಚಿಸಿಕೊಂಡಿದ್ದಾರೆ.

ಶ್ರೀ ವೆಂಕಟರಮಣ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!