16.1 C
New York
Friday, October 22, 2021

Buy now

spot_img

ಕರೋನಾ ಭಯ ಬಿಟ್ಟು ಬದುಕು ಮುನ್ನೆಡಿಸಿ

ಕರೋನಾ ಬಂದು ಇಲ್ಲೆ ನೆಲೆ ನಿಂತಿದೆ. ಸದ್ಯಕ್ಕಿದನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಪಂಚದಲ್ಲಿ ಭಾರತಕ್ಕೆ ಮೂರನೆ ಸ್ಥಾನ. ದೇಶದ ಜನರ ಬೇಜವಬ್ದಾರಿಯೊಂದಿಗೆ ಆಳುವ ವರ್ಗಗಳ ಯಡಬಿಡಂಗಿ, ಬೇಜವಬ್ದಾರಿ ನೀತಿಗಳಿಂದಾಗಿ ಇಂದು ಮಹಾಮಾರಿಯಂತೆ ಕೊರೊನಾ ಪಿಡುಗು ಎಲ್ಲರನ್ನು ಆವರಿಸಿದೆ. ದೇಶದ ಸಾಮಾನ್ಯ ಜನರನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸಿದೆ. ಜನರಲ್ಲಿ ಭಯವನ್ನು ಹುಟ್ಟಿಸಿ ಸಾವನ್ನು ಕಣ್ಣಮುಂದೆ ತಂದು ನಿಲ್ಲಿಸುವ ಕಾರ್ಯವು ಮಾದ್ಯಮಗಳಿಂದಲೂ ನೆಡೆಯುತ್ತಿದೆ. ಸರಕಾರವೂ ಈ ನಿಟ್ಟಿನಲ್ಲಿ ಮೌನವಾಗಿ ಬಿಟ್ಟಿದೆ. ವ್ಯವಸ್ಥಿತವಾಗಿ ಬೆದರಿಸುವ ತಂತ್ರಗಾರಿಕೆಯೂ ಇನ್ನೊಂದು ಕಡೆಯಿಂದ ಆಗುತ್ತಿರುವುದನ್ನು ನೋಡಬಹುದಾಗಿದೆ. ಕೊರೊನಾ ಜಗತ್ತನ್ನೆ ವ್ಯಾಪಿಸಿದ ವ್ಯಾದಿ. ವೇಗವಾಗಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತದೆ. ಇದರ ಹೆದರಿಕೆಯಿಂದಾಗಿ ಇಡೀ ಆರ್ಥಿಕ ವ್ಯವಸ್ಥೆ ಹಳಿತಪ್ಪಿದೆ, ಅಲ್ಲೋಲಕಲ್ಲೋಲವಾಗಿದೆ. ಕೆಲವು ಕಡೆ ಊಟಕ್ಕೂ ಪರದಾಡ ಬೇಕಾದ ಪರಿಸ್ಥಿತಿ ಬಂದಿದೆ. ಕೆಲಸಕಾರ್ಯವಿಲ್ಲದೆ ಜನ ಕಂಗಾಲಾಗಿದ್ದಾರೆ. ಆರ್ಥಿಕ ಹೊಡೆತದ ಜೊತೆಗೆ ಭಯದ ವಾತಾವರಣದಲ್ಲಿ ಜನ ಬದುಕುತ್ತಿದ್ದಾರೆ. ಕರೋನಾಕ್ಕಿಂತ ಭೀಕರ ಖಾಯಿಲೆಗಳು ನಮ್ಮ ಕಣ್ಣ ಮುಂದೆ ಇದೆ. ಆದರೆ ಈ ಖಾಯಿಲೆ ಜಗತ್ತು ವ್ಯಾಪಿಸಿದ್ದರ ಪರಿಣಾಮದಿಂದ ಇಷ್ಟೊಂದು ಭೀಕರತೆಯನ್ನು ಕಂಡುಕೊಂಡಿದೆ. ಇದರಿಂದಾಗಿಯೇ ಜನರು ಹೆದರುವಂತಾಗಿದೆ. ಆಳುವ ಸರಕಾರಗಳು ಮಾಡಿದ ತಪ್ಪಿನಿಂದಾಗಿ ಜಗತ್ತಿನ ಎಲ್ಲಾ ಜನರುಗಳು ಒಂದು ಹಂತದ ಜೀವನದಲ್ಲೇ ನಿರುತ್ಸಾಹ ಪಡುವಂತಾಗಿದೆ. ಇಂದು ಆಸ್ಪತ್ರೆಗಳಲ್ಲಿ ಸಾಮಾನ್ಯ ಖಾಯಿಲೆಗಳಿಗೂ ಚಿಕಿತ್ಸೆ ದೊರೆಯದಂತಾಗಿದೆ. ಕರೊನಾಗಿಂತ ಬೇರೆ ಬೇರೆ ಕಾಯಿಲೆಗಳಿಂದ ಜಾಸ್ತಿ ಜನ ಸಾಯುತ್ತಿದ್ದಾರೆ. ಅದನ್ನು ಗಂಬೀರವಾಗಿ ಪರಿಗಣಿಸಬೇಕಾಗಿದೆ. ಇದೀಗ ದೇಶದಲ್ಲಿ ಒಂದು ಹಂತದ ಲಾಕ್‌ಡೌನ್ ಪ್ರಕ್ರಿಯೆ ಮುಗಿದಿದೆ. ಆರ್ಥಿಕ ಪರಿಸ್ಥಿತಿಯನ್ನು ಜನರೆ ಸುಧಾರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಾದ ಅಗತ್ಯತೆ ಇದೆ. ದಿನವೂ ಸಾವಿರಾರು ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ. ಇದೊಂದು ಆತಂಕಕಾರಿ ವಿಷಯವೂ ಹೌದು. ಇದನ್ನು ಭಯಾನಕವಾಗಿ ಸೃಷ್ಟಿಸಿ ಜನರ ಮುಂದೆ ಇಟ್ಟ ಪರಿಣಾಮವಾಗಿ ಜನ ಭಯ ಪಡುವಂತಾಗಿದೆ. ಕರೋನಾ ಹೋಗಲಾಡಿಸುವ ನಿಟ್ಟಿನಲ್ಲಿ ಸರಕಾರ ಆರೋಗ್ಯ ಇಲಾಖೆಯನ್ನು ಬಲಪಡಿಸಬೇಕಾಗಿದೆ. ಅಲ್ಲಿ ಸೇವೆಸಲ್ಲಿಸುತ್ತಿರುವ ಎಲ್ಲಾ ವೈದ್ಯರುಗಳಿಗೆ ಸಿಬ್ಬಂದಿಗಳಿಗೆ ಯೋಗ್ಯ ವೇತನವನ್ನು, ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಹಗಲು ರಾತ್ರಿ ಅವರು ಕೆಲಸವನ್ನು, ಸೇವೆಯನ್ನು ಮಾಡುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಇನ್ನೂ ಪೂರ್ಣಪ್ರಮಾಣದ ಸಿಬ್ಬಂದಿಗಳನ್ನು ನೇಮಕ ಮಾಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಸರ್ವಾಧಿಕಾರಿಗಳಂತೆ ವರ್ತಿಸುವ ಮೇಲಾಧಿಕಾರಿಗಳಿಗೆ ಇದು ಯಾವುದು ಗಮನಕ್ಕೆ ಬರುವುದಿಲ್ಲ. ಸರಕಾರ ಅತ್ಯಂತ ತುರ್ತಾಗಿ ಮಾಡಬೇಕಾಗಿರುವುದು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು. ಸಾವಿರಾರು ಸಮಖ್ಯಯ ಗುದ್ದೆಗಳು ಖಾಲಿ ಬಿದ್ದಿವೆ. ಗ್ರಾಮೀಣ ಭಾಗದ ಜನ ಚಿಕಿತ್ಸೆಗೆ ಅಲೆದಾಡುವ ಪ್ರಸಂಗ ತಪ್ಪಿಸಬೇಕಾಗಿದೆ. ಗ್ರಾಮೀಣ ಭಾಗದ ಜನ ಅಲ್ಲಲ್ಲೆ ಚಿಕಿತ್ಸೆ ಪಡೆದುಕೊಳ್ಳಿವಂತ ಸುಸಜ್ಜಿತ ವ್ಯವಸ್ಥೆಯನ್ನು ನೂರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಾಡಬಹುದು.
ಇದೊಂದು ಸಾಮಾನ್ಯ ಖಾಯಿಲೆಯಂತೆ ಜನ ತಿಳಿದುಕೊಂಡು ಎಚ್ಚರಿಕೆಯನ್ನು ಸಹ ವಹಿಸಬೇಕಾಗಿದೆ. ಕರೋನಾ ಈವರೆಗೆ ಯಾವುದೇ ಔಷಧಿಯನ್ನು ಕಂಡು ಹಿಡಿಯದೆ ಶೇಕಡಾ ತೊಂಬತ್ತೆಂಟರಷ್ಟು ಪ್ರಕರಣಗಳು ಗುಣವಾಗುತ್ತಿದೆ. ಕೆಲವೇ ಪ್ರಕರಣಗಳಿಂದ ಸಾವು ಸಂಭವಿಸುತ್ತದೆ. ಪಾಸಿಟಿವ್ ಬಂದವರು ಕೆಲವೇ ದಿನಗಳಲ್ಲಿ ಗುಣಮುಖರಾಗಿ ಮನೆ ಸೇರುತ್ತಿರುವ ವರದಿಯನ್ನು ನೋಡ ಬಹುದಾಗಿದೆ. ಆದ್ದರಿಂದ ಭಯವನ್ನು ಬಿಟ್ಟು ಹಾಕಿ ಮುಂದಿನ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಿರಂತರ ಎಚ್ಚರಿಕೆಯನ್ನು ವಹಿಸುವುದರ ಮೂಲಕ ಮತ್ತೆ ಬದುಕನ್ನ ಕಟ್ಟಿಕೊಳ್ಳುವ ಸಿದ್ದತೆಯನ್ನು ಈಗಲೇ ಮಾಡಿಕೊಳ್ಳಬೇಕಾಗಿದೆ. ಸರಕಾರ ಈ ನಿಟ್ಟಿನಲ್ಲಿ ಜನರನ್ನು ಜಾಗೃತಿಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ವರೆಗೆ ಯಾವ ಲಾಕ್‌ಡೌನ್‌ನಿಂದಲೂ ಏನು ಪ್ರಯೋಜನವಾಗಿಲ್ಲ ಎಂಬುದು ಜನರ ಭಾವನೆಯಲ್ಲಿದೆ. ಮುಂದಿರುವುದು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬದುಕನ್ನು ಮುನ್ನೆಡುಸುವುದು. ಆ ನಿಟ್ಟಿನಲ್ಲಿ ಸಮಾಜ ಚಿಂತಿಸಬೇಕಾಗಿದೆ. ಜಾಗೃತರಾಗಿರೋಣ, ಭಯ ಬಿಟ್ಟುಬಿಡೋಣ, ಬದುಕನ್ನು ಮುನ್ನೆಡೆಸೋಣ.

-ಸುಬ್ರಹ್ಮಣ್ಯ ಪಡುಕೋಣೆ

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!